ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರು: ದೇಶದ 2ನೇ ಅತೀದೊಡ್ಡ ಮೇಲ್ಸೆತುವೆಗೆ ಚಾಲನೆ (eliveted road | Yeddyurappa | Moily | Karnataka | BJP)
Bookmark and Share Feedback Print
 
ಸಿಲಿಕಾನ್ ಸಿಟಿಯಲ್ಲಿ ದೇಶದಲ್ಲಿಯೇ 2ನೇ ಅತಿ ದೊಡ್ಡ ಹಾಗೂ ರಾಜ್ಯದಲ್ಲೇ ಪ್ರಥಮ ಅತಿ ಉದ್ದದ ಮೇಲ್ಸೆತುವೆ(ಎಲಿವೇಟೆಡ್)ಯನ್ನು ಶುಕ್ರವಾರ ಕೇಂದ್ರ ಸಚಿವ ಕಮಲ್‌ನಾಥ್ ರಿಮೋಟ್ ಮೂಲಕ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

ಸುಮಾರು 9.5ಕಿ.ಮೀ.ಉದ್ದದ ನೂತನ ಎಲಿವೇಟೆಡ್ ಸೇತುವೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ನಿರ್ಮಾಣಗೊಂಡಿದೆ. 880ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಫ್ಲೈ ಓವರ್ ರಾಷ್ಟ್ರದಲ್ಲೇ ದ್ವಿತೀಯ ಅತಿ ಉದ್ದದ ಮೇಲ್ಸೆತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೇಲ್ಸೆತುವೆ ನಿರ್ಮಾಣದಿಂದಾಗಿ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಯಾವುದೇ ರೀತಿಯ ಟ್ರಾಫಿಕ್ ಜಾಮ್ ಇರುವುದಿಲ್ಲ. ಮೇಲು ರಸ್ತೆಯಲ್ಲಿ ನಾಲ್ಕು ಲೈನ್ ಇದೆ. ರಸ್ತೆ ಕೆಳಭಾಗದಲ್ಲಿ ಮೂರು ಲೈನ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಗೊಂಡಿದೆ.

ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಮೇಲ್ಸೆತುವೆಯಲ್ಲಿ ಸರ್ವೆಲೆನ್ಸ್ ಕ್ಯಾಮರಾ ಅಳವಡಿಸಲಾಗಿದೆ. ಒಂದು ವೇಳೆ ಅತಿ ವೇಗದಿಂದ ಚಲಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಕ್ಯಾಮರಾ ಸಹಾಯದಿಂದ ವಾಹನ ಸವಾರರನ್ನು ಕ್ಷಣಾರ್ಧದಲ್ಲಿ ಹಿಡಿಯಲು ಸಹಾಯಕವಾಗಲಿದೆ.

ನೂತನ ಎಲಿವೇಟೆಡ್ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ವಾಹನಕ್ಕೆ 10, ಕಾರು-30, ಬಸ್, ಟ್ರಕ್-70, ಲಘವಾಹನಕ್ಕೆ-40ರೂ. ಟೋಲ್ ನಿಗದಿಪಡಿಸಲಾಗಿದೆ.

ಇಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಕೆ.ಎಚ್.ಮುನಿಯಪ್ಪ, ಸಂಸದ ಅನಂತ್ ಕುಮಾರ್, ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ