ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉ.ಕರ್ನಾಟಕ ನೆರೆಹಾವಳಿ: ಕೇಂದ್ರದಿಂದ 957 ಕೋಟಿ ಬಿಡುಗಡೆ (Flood | North Karnataka | Central Govt)
Bookmark and Share Feedback Print
 
ಉತ್ತರ ಕರ್ನಾಟಕದ ನೆರೆಹಾವಳಿ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪ್ರಕೋಪ ನಿಧಿಯಿಂದ 957 ಕೋಟಿ 49 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಅತಿವೃಷ್ಟಿಯಿಂದ ತೊಂದರೆಗೀಡಾದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಒಂದು ಸಾವಿರ ಕೋಟಿ ರೂ ಘೋಷಿಸಿದ್ದರು. 500 ಕಂತು ರೂ.ಮೊದಲ ಕಂತು ಬಿಡುಗಡೆ ಆಗಿತ್ತು. ಈಗ ಮತ್ತೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ವಿಕೋಪ ಪ್ರತಿನಿಧಿ ಧನಂಜಯ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ಪರಿಹಾರ ಕಾರ್ಯಗಳಿಗೆ ಏಳು ಸಾವಿರ ಕೋಟಿ ರೂ ಕೇಳಿತ್ತು. ನೆರೆ ಸಂತ್ರಸ್ತರ ಜಿಲ್ಲೆಗಳಲ್ಲಿ ಇಂದಿರ ಆವಾಸ್ ಯೋಜನೆಯಡಿ 2 ಲಕ್ಷ ಮನೆಗಳನ್ನು ನಿರ್ಮಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು. ಒಟ್ಟು 5 ಲಕ್ಷ ಮನೆ ನಿರ್ಮಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಧನಂಜಯ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ