ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಂಗಳೂರು ಹಿಂದೂ ಸಮಾವೇಶಕ್ಕೆ ವರುಣ್ ಗಾಂಧಿ ಬರಲ್ಲ (Varun Gandhi | Mangalore | Hindu Yuva Samavesha | Nehru Maidan)
Bookmark and Share Feedback Print
 
ಮಂಗಳೂರು: ಇಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಯುವ ಸಮಾವೇಶಕ್ಕಾಗಿ ಉರಿ ನಾಲಗೆ ಖ್ಯಾತಿಯ ಬಿಜೆಪಿ ಸಂಸದ ವರುಣ್ ಗಾಂಧಿ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೊನೆ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತನ್ನ ಭಾಷಣವೊಂದರಿಂದ ಭಾರೀ ವಿವಾದಕ್ಕೆ ಗುರಿಯಾಗಿದ್ದ ವರುಣ್ ಮಂಗಳೂರಿಗೆ ಬರಲಿದ್ದಾರೆ ಎಂದು ಬಜರಂಗ ದಳ ಮತ್ತಿತರ ಸಂಘಟನೆಗಳು ಹೇಳಿಕೊಂಡಿದ್ದವು. ಆದರೆ ಅವರು ತನ್ನ ಭೇಟಿಯನ್ನು ಖಚಿತಪಡಿಸಿರಲಿಲ್ಲ ಎಂದು ಮೂಲಗಳು ಹೇಳಿವೆ.

ಭಾನುವಾರದ ಈ ಹಿಂದೂ ಯುವ ಸಮಾವೇಶ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 3,550 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರಲ್ಲಿ 1,858 ಮಂದಿ ಹೊರ ಜಿಲ್ಲೆಯವರು ಹಾಗೂ 1,700 ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಎಂದು ಜಿಲ್ಲಾ ಆಡಳಿತ ತಿಳಿಸಿದೆ.

ಎಂಟು ಡಿವೈಎಸ್ಪಿಗಳು, 44 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 111 ಸಬ್ ಇನ್ಸ್‌ಪೆಕ್ಟರ್‌ಗಳು, 110 ಮಹಿಳಾ ಪೊಲೀಸ್, ಜಿಲ್ಲಾ ಶಶಸ್ತ್ತ ಮೀಸಲು ಪೊಲೀಸ್ ಹಾಗೂ ಕಮಾಂಡೋ ಪಡೆಗಳನ್ನು ಕೂಡ ನಿಯೋಜಿಸಲಾಗಿದೆ.

ಕಾಂಗ್ರೆಸ್ ಮನವಿ...
ಹಿಂದೂ ಸಮಾಜೋತ್ಸವದಲ್ಲಿ ಯಾವುದೇ ಧರ್ಮಗಳಿಗೆ ನೋವಾಗುವಂತಹ ಭಾಷಣಗಳಿಗ ಅವಕಾಶ ನೀಡದಂತೆ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡದಂತೆ ಕಾರ್ಯಕ್ರಮದ ಸಂಘಟಕರಿಗೆ ಸೂಚನೆ ನೀಡಲಾಗಿದೆ. ಅವರಿದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಂಪೂರ್ಣ ಕಾರ್ಯಕ್ರಮವನ್ನು ವಿವಿಧೆಡೆ ಚಿತ್ರೀಕರಣ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಚಿತ ಬಸ್...
ಹಿಂದೂ ಯುವ ಸಮಾವೇಶದಲ್ಲಿ ಭಾಗವಹಿಸುವ ಆಸಕ್ತರಿಗೆ ದಕ್ಷಿಣ ಕನ್ನಡ ಬಸ್ ಮಾಲಕ ಸಂಘ ಮತ್ತು ಕೆನರಾ ಬಸ್ ಮಾಲಕ ಸಂಘಗಳು ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡುತ್ತಿದೆ.

ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಸಹೃದಯವಂತರೂ ಬೆಂಬಲ ನೀಡಬೇಕೆಂದು ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿಕೊಂಡಿದ್ದು, ಹಲವು ಬಿಜೆಪಿ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ