ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೊಯ್ಲಿ ಹೇಳಿಕೆ ಸತ್ಯಕ್ಕೆ ದೂರ: ಸಚಿವ ಸುರೇಶ್ ಸ್ಪಷ್ಟನೆ (S. Suresh Kumar | Karnataka | Veerappa Moily | Central govt)
Bookmark and Share Feedback Print
 
ನರ್ಮ್ ಯೋಜನೆಯ 22 ಸಾವಿರ ಕೋಟಿ ರೂ. ಅನುದಾನ ಉಪಯೋಗಿಸಿಕೊಳ್ಳುವಲ್ಲಿ ರಾಜ್ಯ ವಿಫಲವಾಗಿದೆ ಎಂಬ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನರ್ಮ್ ಯೋಜನೆಯಡಿ ಬಿಬಿಎಂಪಿ 22,536 ಕೋಟಿ ರೂ. ಬಂಡವಾಳ ಹೂಡಿಕೆಗೆ ನಗರಾಭಿವೃದ್ದಿ ನಕ್ಷೆ ಸಿದ್ದಪಡಿಸಿ ಸಲ್ಲಿಸಿತ್ತು. ಆದರೆ, 2005-2012ನೇ ಸಾಲಿಗೆ ಬೆಂಗಳೂರು ಹಾಗೂ ಮೈಸೂರು ನಗರ ಸೇರಿದಂತೆ 1,952.59 ಕೋಟಿ ಅನುದಾನವನ್ನು ಮಾತ್ರ ಕೇಂದ್ರ ಸರಕಾರ ನಿಗದಿಪಡಿಸಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸಹಭಾಗಿತ್ವದಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ 88 ಯೋಜನೆಗಳನ್ನು ಅನುಮೋದನೆಗೆ ಕಳುಹಿಸಲಾಗಿದೆ. ಇದರಲ್ಲಿ 66 ಯೋಜನೆಗಳಿಗೆ ಅನುಮೋದನೆ ದೊರಕಿದೆ. ಡಿಸೆಂಬರ್ 31ರವರೆಗೆ 755.13 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ.

ಇದರಲ್ಲಿ ನಗರಕ್ಕೆ 485.57 ಕೋಟಿ ರೂ.ಹಾಗೂ ಮೈಸೂರಿಗೆ 269.56 ಕೋಟಿ ರೂ.ನಿಗದಿ ಪಡಿಸಲಾಗಿದೆ. ಈ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಪ್ರಗತಿ ವೇಗ ತೃಪ್ತಿಕರವಾಗಿದೆ ಎಂದು ಹೇಳಿದರು
ಸಂಬಂಧಿತ ಮಾಹಿತಿ ಹುಡುಕಿ