ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲಾ ಮಸೀದಿ,ದೇವಸ್ಥಾನಕ್ಕೆ ಭದ್ರತೆ ಅಸಾಧ್ಯ: ಆಚಾರ್ಯ (BJP | Yeddyurappa | Acharya | Karnataka | Church)
Bookmark and Share Feedback Print
 
ರಾಜ್ಯದಲ್ಲಿರುವ ಎಲ್ಲಾ ಪೂಜಾ ಮಂದಿರ, ಚರ್ಚ್, ಮಸೀದಿಗಳಿಗೆ ಸರ್ಕಾರದಿಂದ ಭದ್ರತೆ ಒದಗಿಸುವುದು ಅಸಾಧ್ಯ ಎಂದು ಹೇಳಿರುವ ಗೃಹ ಸಚಿವ ವಿ.ಎಸ್.ಆಚಾರ್ಯ ತಮ್ಮದೆಯಾದ ಸ್ವಂತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ 1.25ಕೋಟಿ ಮನೆಗಳಿವೆ, 43ಸಾವಿರ ದೇವಾಲಯಗಳಿವೆ, 3ಸಾವಿರ ಚರ್ಚ್, 3ಸಾವಿರ ಮಸೀದಿಗಳಿವೆ. 90ಸಾವಿರ ಪೊಲೀಸರಿದ್ದಾರೆ. ಈ ಪ್ರಮಾಣದ ಸಿಬ್ಬಂದಿಯಿಂದ ಮಸೀದಿ, ಮಂದಿರ, ದೇವಾಲಯಗಳಿಗೆ ಭದ್ರತೆ ಒದಗಿಸುವುದು ಅಸಾಧ್ಯ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.

ರಾಜಕೀಯದ ದುರ್ಲಾಭ ಪಡೆಯಲು ಕಿಡಿಗೇಡಿಗಳು ಚರ್ಚ್ ಮೇಲೆ ದಾಳಿ ನಡೆಸಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದರು. ಹುಂಡಿ ಒಡೆಯಲಿಕ್ಕೂ ಕಿಡಿಗೇಡಿಗಳು ಈ ಕೃತ್ಯ ಎಸಗಿರಲೂಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ ಚರ್ಚ್‌ಗಳ ಮೇಲೆ ಮಾತ್ರವಲ್ಲದೆ, ದೇವಾಲಯಗಳಿಗೂ ನುಗ್ಗಿ ಪ್ರತಿಮೆ ನಾಶಗೊಳಿಸಿ ಹುಂಡಿ ದೋಚಿರುವ ಪ್ರಸಂಗಗಳು ನಡೆದಿವೆ ಎಂದು ಡಾ.ಆಚಾರ್ಯ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ