ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮನುವಾದಿ ಸರ್ಕಾರಗಳಿಂದ ಅಭಿವೃದ್ಧಿಗೆ ಅಡ್ಡಿ: ಬಿಎಸ್ಪಿ (BJP | Congress | BSP | Karnataka | Manuvadi)
Bookmark and Share Feedback Print
 
ಸಂವಿಧಾನ ಶಿಲ್ಬಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳು ಸಮರ್ಪಕವಾಗಿ ಜಾರಿಯಾಗಿದ್ದರೆ ಮನುವಾದಿಗಳಿಗೆ ಉಳಿಗಾಲವಿರಲಿಲ್ಲ. ಹೀಗಾಗಿ ಅವರು ಅದಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ದೂರಿದರು.

ನಗರದ ವಾಸವಿ ಮಹಲ್‌ನಲ್ಲಿ ಶುಕ್ರವಾರ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನದ ಆಶಯಗಳನ್ನು ವಿಫಲಗೊಳಿಸಿರುವ ಮನುವಾದಿ ಸರ್ಕಾರಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಳೆದ 60ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮನುವಾದಿ ಸರ್ಕಾರಗಳು ಸಂವಿಧಾನದಲ್ಲಿರುವ ಬಹುತೇಕ ಕಾನೂನು ಜಾರಿಗೊಳಿಸಲು ಮುಂದಾಗಿಲ್ಲ. ಅಲ್ಲದೇ, ತಮಗೆ ತೊಡಕುಂಟು ಮಾಡುತ್ತಿದ್ದ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಸಂವಿಧಾನ ನಿಷ್ಕ್ರಿಯಗೊಳಿಸುವ ಕುತಂತ್ರ ನಡೆಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಅಂಬೇಡ್ಕರ್ ಸಂವಿಧಾನ ನಾಶವಾಗುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಲದೇ ಸಂಘಪರಿವಾರದವರು ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ನಮ್ಮ ಆಹಾರ ಪದ್ಧತಿ ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಸಂವಿಧಾನದಲ್ಲಿ ಗೋಹತ್ಯೆ ನಿಷೇಧಿಸುವಂತೆ ತಿಳಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಅಂಬೇಡ್ಕರ್ ಮಾಂಸ ತಿನ್ನಬೇಡಿ ಎಂದು ಹೇಳಿಲ್ಲ. ಸಂವಿಧಾನದಲ್ಲಿ ಹಾಲು ನೀಡುವ ಹಸು ಹಾಗೂ ಕರು ಕಡಿಯಬಾರದು ಎಂದು ಉಲ್ಲೇಖಿಸಲಾಗಿದೆ. ಶೂದ್ರರಾದ ನಾವು ಯಾವುದೇ ಕಾರಣಕ್ಕೂ ಹಸು, ಕರುಗಳನ್ನು ಕಡಿಯುವುದಿಲ್ಲ. ಗೋಹತ್ಯೆ ನಿಷೇಧ ಮಾಡಲು ಹೊರಟಿರುವ ವಿಶ್ವೇಶ್ವರತೀರ್ಥ ಸ್ವಾಮೀಜಿ, ರಾಮದೇವ್ ಕುರಿ, ಕೋಳಿ ಹಾಗೂ ಇತರೆ ಪ್ರಾಣಿಗಳ ಬಲಿ ನಿಷೇಧಿಸಲಿ ಎಂದು ಸವಾಲು ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ