ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಹಿರಂಗ ಸಭೆಯಲ್ಲೇ ಸಿಎಂ-ಶಾಸಕ ಪಾಟೀಲ್ ಜಟಾಪಟಿ! (BJP | Yeddyurappa | Janardana Reddy | Gulbarga | Nithn)
Bookmark and Share Feedback Print
 
ಸರ್...ನನ್ನ ಮನಸ್ಸಿಗೆ ಬಹಳ ನೋವಾಗಿದೆ...ಸ್ಥಳೀಯ ಕಾರ್ಯಕ್ರಮಗಳಿಗೆ ಶಾಸಕರು ಬರುವ ಅಗತ್ಯವಿಲ್ಲ ಅಂತ ನೇರವಾಗಿ ಹೇಳಿ...ಹೀಗೆ ಬಹಿರಂಗವಾಗಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡವರು ಗುಲ್ಬರ್ಗಾ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ್!

ವಾಜಪೇಯಿ ಆರೋಗ್ಯಶ್ರೀ ಬೃಹತ್ ಉಚಿತ ಆರೋಗ್ಯ ಶಿಬಿರದ ಸಮಾರಂಭದ ವೇದಿಕೆಯಲ್ಲಿಯೇ ಶಾಸಕ ಪಾಟೀಲ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆಯಿತು.

ತನ್ನನ್ನು ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ತಮ್ಮ ಕಾರಿನಲ್ಲಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದು, ಸ್ಥಳೀಯ ಕಾರ್ಯಕ್ರಮಗಳು ನಡೆಯುವಾಗ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಪಾಟೀಲ್ ಬಹಿರಂಗವಾಗಿಯೇ ಹೇಳುತ್ತಿದ್ದಂತೆಯೇ, ಆಕ್ರೋಶಗೊಂಡ ಮುಖ್ಯಮಂತ್ರಿಗಳು, ಏನ್ ಮಾತಾಡ್ತ ಇದ್ದೀರಿ. ಏನ್ ನೋವಾಗಿದೆ ನಿಮಗೆ.ಅದನ್ನು ಬಹಿರಂಗವಾಗಿ ಯಾಕೆ ಹೇಳ್ತಿರಿ ಎಂದು ತರಾಟೆಗೆ ತೆಗೆದುಕೊಂಡರು. ನನಗೆ ಮನಸ್ಸಿಗೆ ತುಂಬಾ ನೋವಾಗಿದೆ ಸರ್...ಅದಕ್ಕೆ ಹೇಳಿದೆ ಎಂದಾಗ. ಏನ್ ನೋವಾಗಿದೆ. ಯಾಕೆ ಸುಮ್ನೆ ನೋವು ಮಾಡಿಕೊಳ್ಳುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ, ತನಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದ ಎಂದು ಮಾತು ಮುಗಿಸಿದರು. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಿಡಿಯಾಗಿದ್ದರು.

ಇತ್ತೀಚೆಗಷ್ಟೇ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಈಶ್ವರಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಪಕ್ಷದಲ್ಲಿ ಯಾವುದೇ ಭಿನ್ನಮತ ಉದ್ಭವಿಸದಂತೆ ನಡೆದುಕೊಳ್ಳಬೇಕು. ಅಲ್ಲದೇ ಅಸಮಾಧಾನಗಳನ್ನು ಬಹಿರಂಗವಾಗಿ ಹೇಳಿಬಾರದು, ಅದನ್ನು ಪಕ್ಷದ ವೇದಿಕೆಯಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದರು.

ಗಣಿಧಣಿ ರೆಡ್ಡಿ ಸಹೋದರರ ಬೆಂಬಲಿಗರಾಗಿರುವ ಶಾಸಕ ಪಾಟೀಲ್ ಅವರ ಅಸಮಾಧಾನದ ಹಿಂದೆ ರೆಡ್ಡಿಗಳ ಕೈವಾಡ ಇದೆ ಎಂದು ರಾಜಕೀಯ ವಲಯದಲ್ಲಿ ಶಂಕಿಸಲಾಗುತ್ತಿದೆ. ಇಂದಿನ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಚರ್ಚೆ ನಡೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಮನ್ವಯ ಸಮಿತಿ ಸಭೆ ಕರೆದಿದೆ.
ಸಂಬಂಧಿತ ಮಾಹಿತಿ ಹುಡುಕಿ