ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 3 ತಿಂಗಳಲ್ಲಿ ಪರಿಷ್ಕೃತ ವಾರ್ಡ್ ಮೀಸಲು ಪಟ್ಟಿ: ಬಿಜೆಪಿ (BBMP | Suresh kumar | High court | Supreme court)
Bookmark and Share Feedback Print
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರಿಷ್ಕೃತ ವಾರ್ಡ್ ಮೀಸಲು ಪಟ್ಟಿಯನ್ನು ಮುಂದಿನ ಮೂರು ತಿಂಗಳೊಳಗೆ ನಿಗದಿಪಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೆರಡು ದಿನದಲ್ಲಿ ವಾರ್ಡ್ ಮೀಸಲು ಪರಿಷ್ಕರಣೆ ಮಾರ್ಗಸೂಚಿ ಪ್ರಕಟಿಸುವ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು ಎಂದರು.

ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ನಸ್ಸಿ ಮಾಡಿರುವ ಮನವಿಯಂತೆ ವಾರ್ಡ್‌ಗಳ ಮೀಸಲು ಪರಿಷ್ಕರಣೆ ಮಾಡಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ವಾರ್ಡ್‌ಗಳ ಮೀಸಲು ಪರಿಷ್ಕರಣೆ ಮಾಡಲು ರಾಜ್ಯ ಹೈಕೋರ್ಟ್‌ನಲ್ಲಿ ಸರ್ಕಾರ ಕಾಲಾವಕಾಶ ಕೋರಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ