ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿ:8 ದಿನದ ನಂತ್ರವೂ ಅವಶೇಷದಡಿ ಬದುಕುಳಿದ ಮಲ್ಲಯ್ಯ! (Ballary | Karnataka | Police | Somashekar Reddy)
Bookmark and Share Feedback Print
 
ಬಳ್ಳಾರಿ ಬಹುಮಹಡಿ ಕಟ್ಟಡ ಅವಶೇಷದಡಿಯಲ್ಲಿ ಕಳೆದ ಎಂಟು ದಿನಗಳಿಂದ ಯಾವುದೇ ಆಹಾರ ಸೇವಿಸದೆ ಪವಾಡಸದೃಶವಾಗಿ ಬದುಕಿರುವ ವ್ಯಕ್ತಿಯೊಬ್ಬ ಬುಧವಾರ ಪತ್ತೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ.

ಜನವರಿ 26ರಂದು ಸಂಭವಿಸಿದ ಬಹುಮಹಡಿ ಕಟ್ಟಡ ದುರಂತದಲ್ಲಿ ಸುಮಾರು 25ಮಂದಿ ಸಾವನ್ನಪ್ಪಿದ್ದರು. ಮಂಗಳವಾರ ಅಂತಿಮ ಕಾರ್ಯಾಚರಣೆ ಎಂಬಂತೆ ಇಡೀ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಪ್ರತಿದಿನ ಮೃತದೇಹಗಳನ್ನೇ ಹೊರತೆಗೆಯಲಾಗುತ್ತಿತ್ತು. ಅಲ್ಲದೇ, ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿದವರು ಸಾವನ್ನಪ್ಪಿರುವುದಾಗಿಯೇ ಎಲ್ಲರೂ ನಂಬಿದ್ದರು. ಆದರೆ ಪವಾಡ ಎಂಬಂತೆ ಇಂದು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮಲ್ಲಯ್ಯ ಎಂಬ ಕಾರ್ಮಿಕ ಜೀವಂತವಾಗಿ ಪತ್ತೆಯಾಗುವ ಮೂಲಕ ರಕ್ಷಣಾ ಸಿಬ್ಬಂದಿ ಸೇರಿದಂತೆ ಸಾರ್ಜಜನಿಕರು ಅಚ್ಚರಿಗೆ ಒಳಗಾಗುವಂತ ಘಟನೆ ನಡೆಯಿತು.

ಆಂಧ್ರಪ್ರದೇಶದ ಕರ್ನೂಲ್ ಮೂಲದ ಮಲ್ಲಯ್ಯ ಕಳೆದ ಎಂಟು ದಿನಗಳ ನಂತರವೂ ಜೀವಂತವಾಗಿ ಉಳಿದಿರುವ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದ ಅವಶೇಷದಡಿಯಲ್ಲಿ ಇನ್ನೂ ನಾಲ್ಕು ಮಂದಿ ಬದುಕುಳಿದಿರುವ ಸಾಧ್ಯತೆ ಇರುವುದಾಗಿ ಜೀವಂತವಾಗಿ ಪತ್ತೆಯಾಗಿರುವ ಮಲ್ಲಯ್ಯ ಮಾಹಿತಿ ನೀಡಿದ್ದಾನೆ. ಅದರಲ್ಲಿ ನಾಗಮ್ಮ ಎಂಬ ಮಹಿಳೆಯೂ ಕೂಡ ಅವಶೇಷದಡಿಯಲ್ಲಿ ಇದ್ದಿರುವುದಾಗಿ ತಿಳಿಸಿದ್ದ. ಆದರೆ ಅವಶೇಷದಡಿಯಲ್ಲಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ ಸಂದರ್ಭದಲ್ಲಿ ನಾಗಮ್ಮ ಶವ ಕೂಡ ಪತ್ತೆಯಾಗುವ ಮೂಲಕ ಕಟ್ಟಡ ದುರಂತದಲ್ಲಿ ಬಲಿಯಾದವರ ಸಂಖ್ಯೆ 26ಕ್ಕೆ ಏರಿದಂತಾಗಿದೆ.

ನಾಲ್ಕು ನಾಯಿ ಮರಿಗಳೂ ಜೀವಂತ: ಅವಶೇಷದಡಿಯಿಂದ ಮಲ್ಲಯ್ಯ ಜೀವಂತವಾಗಿ ಹೊರಬಂದ ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ, ನಾಲ್ಕು ಪುಟ್ಟ, ಪುಟ್ಟ ನಾಯಿ ಮರಿಗಳೂ ಜೀವಂತವಾಗಿ ಪತ್ತೆಯಾಗಿವೆ. ಸರಿಯಾಗಿ ನಡೆದಾಡಲೂ ಆಗದ ನಾಯಿ ಮರಿಗಳನ್ನು ರಕ್ಷಣಾ ಸಿಬ್ಬಂದಿಗಳು ಪೋಷಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇದು ನಿಜಕ್ಕೂ ಪವಾಡ-ಸೋಮಶೇಖರ ರೆಡ್ಡಿ: ಬಳ್ಳಾರಿ ಕಟ್ಟಡ ಅವಶೇಷದಡಿಯಲ್ಲಿ ಕಳೆದ ಎಂಟು ದಿನಗಳವರೆಗೆ ಸಿಲುಕಿದ್ದ ಮಲ್ಲಯ್ಯ ಬದುಕಿ ಉಳಿದದ್ದು ನಿಜಕ್ಕೂ ಪವಾಡ ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆ ಇದ್ದಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಅವರು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ