ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿಕಾರ ಕೊಟ್ಟಿದ್ರೆ ವಿಧಾನಸೌಧ ಖಾಲಿ ಮಾಡಿಸ್ತಿದ್ದೆ: ಹೆಗ್ಡೆ (Lokayuktha | BJP | Congress | Court | Santhosh hegde)
Bookmark and Share Feedback Print
 
NRB
ಭ್ರಷ್ಟರನ್ನು ಶಿಕ್ಷಿಸುವ ಪರಮಾಧಿಕಾರವನ್ನು ಸರ್ಕಾರ ನೀಡಿದ್ದರೆ, ಇಷ್ಟೊತ್ತಿಗಾಗಲೇ ವಿಧಾನಸೌಧ ಮತ್ತು ವಿಕಾಸಸೌಧ ಖಾಲಿ ಮಾಡಿಸುತ್ತಿದ್ದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಗುಡುಗಿದ್ದಾರೆ.

ನಾನೇನು ಲೋಕಾಯುಕ್ತ ಸಂಸ್ಥೆಗೆ ಸರ್ವಾಧಿಕಾರ ನೀಡಿ ಎಂದು ಕೇಳಿರಲಿಲ್ಲ. ಭ್ರಷ್ಟರನ್ನು ಶಿಕ್ಷಿಸಲು ಮತ್ತಷ್ಟು ಅಧಿಕಾರ ಕೊಡಿ ಎಂದಿದ್ದೆ. ಆದರೆ, ಸರ್ಕಾರ ಅದನ್ನು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮೌಲ್ಯ ಶಿಕ್ಷಣ ಮಾಲಿಕೆಯಲ್ಲಿ ಆಡಳಿತ ಮತ್ತು ಭ್ರಷ್ಟಾಚಾರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ನೀಡದೆ ಇರುವ ಸರ್ಕಾರದ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕನಿಷ್ಠ 1456ಬಿಲಿಯನ್ ಅಮೆರಿಕನ್ ಡಾಲರ್ ಎಂದು ಸ್ವಿಸ್ ಬ್ಯಾಂಕ್ ಹೇಳಿದೆ. ಈ ಹಣದಿಂದ ಬರುವ ಬಡ್ಡಿ ಹಣದಲ್ಲಿ ವಿದೇಶದ ಸಾಲವನ್ನು 24ಗಂಟೆಗಳಲ್ಲಿ ತೀರಿಸುವ ಜೊತೆಗೆ 691 ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಿದರೂ ಇನ್ನೂ ಬಡ್ಡಿ ಹಣ ಉಳಿಯುತ್ತಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ