ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬ್ಲಡಿ ಬಾಸ್ಟರ್ಡ್ ಹಾರ್ನಳ್ಳಿ: ಮತ್ತೆ ಗೌಡರ 'ಅಣಿಮುತ್ತು' (Deve gowda | JDS | Yeddyurappa | Kumaraswamy | BJP)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ, ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರನ್ನು 'ಬ್ಲಡಿ ಬಾಸ್ಟರ್ಡ್' ಎಂದು ಆರೋಪಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯುವರ್ ಆನರ್ ದೇವೇಗೌಡರು ಮತ್ತು ಅವರ ಕುಟುಂಬ ನಾಲ್ಕು ಸಾವಿರ ಎಕರೆ ಭೂಮಿ ಹೊಂದಿದೆ ಎಂದು ಹಾರ್ನಳ್ಳಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಾರೆ. ಇಂತಹ ಬ್ಲಡಿ ಬಾಸ್ಟರ್ಡ್ ಅಡ್ವೋಕೇಟ್ ಜನರಲ್ ಇಟ್ಟುಕೊಂಡು ಸರ್ಕಾರ ಯಾವ ರೀತಿ ಜನಪರ ಆಡಳಿತ ನೀಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ತಿಂಗಳು ಯಡಿಯೂರಪ್ಪ ಹಾಗೂ ಅಶೋಕ್ ಹಾರ್ನಳ್ಳಿ ವಿರುದ್ಧ ಬ್ಲಡಿ ಬಾಸ್ಟರ್ಡ್ ಎಂಬ ಶಬ್ದ ಪ್ರಯೋಗಿಸಿದ್ದರು. ನಂತರ ದೆಹಲಿಗೆ ತೆರಳಿದ್ದ ಅವರು ತಮ್ಮ ತಪ್ಪಿನ ಅರಿವಾಗಿ,ನಾನು ಮುಖ್ಯಮಂತ್ರಿಗಳಿಗೆ ಆ ರೀತಿ ಅವಾಚ್ಯ ಶಬ್ದ ಬಳಸಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿ ತೆಪ್ಪಗಾಗಿದ್ದರು.

ಅಲ್ಲದೇ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿ ಸಹಿಸಲಾರದೆ ದೇವೇಗೌಡರು ಆವೇಶಕ್ಕೆ ಒಳಗಾಗಿ ಅಂತಹ ಪದ ಪ್ರಯೋಗಿಸಿರಬಹುದು ಎಂದು ಜೆಡಿಎಸ್ ಪಕ್ಷ ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಇದೀಗ ಮತ್ತೆ ಗೌಡರು ತಮ್ಮ ಅಣಿಮುತ್ತನ್ನು ಉದುರಿಸಿದ್ದಾರೆ.

ಗೌಡರ ವಿರುದ್ಧ ಸಚಿವರ ಮೌನ ಪ್ರತಿಭಟನೆ: ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ವಿರುದ್ಧ ದೇವೇಗೌಡರು ಮತ್ತೆ ಅವಾಚ್ಯ ಶಬ್ದಗಳಿಂದ ಬೈದಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ವಕೀಲರು ಮೌನ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಕೂಡ ಸಾಥ್ ನೀಡಿದರು.

'ದೇವೇಗೌಡರು ಶೀಘ್ರ ಗುಣಮುಖರಾಗಲಿ' ಎಂಬ ಫಲಕ ಹಿಡಿದು ವಕೀಲರು ಪ್ರತಿಭಟನೆ ನಡೆಸಿದರು. ಇಂತಹ ಮೌನ ಪ್ರತಿಭಟನೆ ಗೌಡರ ಮನಸ್ಸಿಗೆ ನಾಟುತ್ತೆ ಎಂಬ ನಂಬಿಕೆ ನಮಗಿಲ್ಲ. ಆದರೆ ಗೌಡರ ಹೇಳಿಕೆ ವಿರುದ್ಧ ಮೌನ ಪ್ರತಿಭಟನೆ ನಡೆಸಿರುವುದಾಗಿ ಸಚಿವ ಸುರೇಶ್ ಕುಮಾರ್ ಅವರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ