ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪಗೆ ಜನಪರ ಕಾಳಜಿಯಿಲ್ಲ: ದೇಶಪಾಂಡೆ ತರಾಟೆ (RV Deshapande | BS Yediyurappa | Manmohan Singh | Karnataka)
Bookmark and Share Feedback Print
 
ಬೆಲೆಯೇರಿಕೆ ಕುರಿತು ಕಿಂಚಿತ್ತಾದರೂ ಚಿಂತೆಯಿದ್ದಿದ್ದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಕರೆದಿದ್ದ ಸಭೆಗೆ ಹೋಗುತ್ತಿದ್ದರು. ಅವರಿಗೆ ಜನಸಾಮಾನ್ಯರ ಕುರಿತು ಕಾಳಜಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಟೀಕಿಸಿದ್ದಾರೆ.

ಪ್ರಧಾನಿಯವರು ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೆ ಯಡಿಯೂರಪ್ಪನವರು ಹೋಗಿರಲಿಲ್ಲ. ಇದನ್ನು ತೀವ್ರವಾಗಿ ಖಂಡಿಸಿರುವ ದೇಶಪಾಂಡೆ, ಅವರ ಜನಪರ ಕಾಳಜಿಯನ್ನೇ ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡುತ್ತಿದ್ದ ಅವರು, ಅಗತ್ಯ ವಸ್ತುಗಳ ಬೆಲೆಯೇರಿಕೆಯ ಕುರಿತು ಚರ್ಚಿಸಲು ಪ್ರಧಾನಿಯವರು ಕರೆದಿದ್ದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪಾಲ್ಗೊಳ್ಳದೇ ಇರುವುದು ಖಂಡನೀಯ. ಅವರಿಗೆ ಜನಸಾಮಾನ್ಯರ ಪರ ಯಾವುದೇ ಕಾಳಜಿಯಿಲ್ಲ. ಇದ್ದಿದ್ದರೆ ಈ ಸಭೆಗೆ ಅವರು ಹೋಗುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರಿಗೇನು, ಇಡೀ ಬಿಜೆಪಿ ಸರಕಾರವೇ ಜನಪರವಲ್ಲ. ಈ ಸರಕಾರ ಸಾಧ್ಯವಾದಷ್ಟು ಬೇಗ ಪತನವಾದರೇ ನೆಮ್ಮದಿ ಎಂದು ತನ್ನ ಮಾತನ್ನು ದೇಶಪಾಂಡೆ ಪುನರುಚ್ಛರಿಸಿದರು.

ರಾಜ್ಯದಲ್ಲಿ ನಡೆದಿದೆ ಎನ್ನಲಾಗಿರುವ ಚರ್ಚ್ ದಾಳಿ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ವಜಾ ಮಾಡಲಿ ನೋಡೋಣ. ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿದೆ. ಇಂಥ ಜನಪ್ರಿಯ ಸರ್ಕಾರ ವಜಾ ಮಾಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ರಾಜ್ಯಪಾಲರು ರಾಜಭವನವನ್ನು ರಾಜಕೀಯ ಕೇಂದ್ರವನ್ನಾಗಿ ಮಾಡಬಾರದು ಎಂಬ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಆರೋಪಕ್ಕೂ ಇದೇ ಸಂದರ್ಭದಲ್ಲಿ ದೇಶಪಾಂಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಾಯ್ಡು ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಮಾತನಾಡಬೇಕು. ರಾಜಭವನವೆಂದರೆ ಕಾಂಗ್ರೆಸ್ ಕಚೇರಿಯೆಂದು ಅವರು ಭಾವಿಸಿದಂತಿದೆ, ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿ ಎಂದು ದೇಶಪಾಂಡೆ ಸಲಹೆಯಿತ್ತರು.
ಸಂಬಂಧಿತ ಮಾಹಿತಿ ಹುಡುಕಿ