ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ (RSS | BJP | Islam | Mohan Bhagavath | Karnataka)
Bookmark and Share Feedback Print
 
PTI
ಇಸ್ಲಾಂನ ಜಿಹಾದಿಗಳಿಗೆ ಹಿಂದೂಗಳ ವಿರುದ್ಧ ಹೋರಾಡುವುದೇ ಪುಣ್ಯದ ಕೆಲಸ ಎಂದು ಭಾವಿಸಿರುವ ಹಾಗೆ, ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವುದೇ ಸೇವೆ ಎಂಬುದಾಗಿ ಹೇಳುತ್ತವೆ. ಇದು ನಿಜಕ್ಕೂ ಅಪರಾಧ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ತಿಳಿಸಿದ್ದು, ಮತಾಂತರ ಮಾಡುವುದು ಸೇವೆಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸೇವಾಭಾರತಿ ನಗರದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಮಟ್ಟದ ಸಮಾವೇಶದಲ್ಲಿ ಕ್ರೈಸ್ತ ಮಿಷನರಿಗಳ ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ಸೇವೆ ಮಾಡುವುದು ಪುಣ್ಯದ ಸಂಪಾದನೆ ಅಲ್ಲ ಎಂದ ಭಾಗ್ವತ್, ಅದರ ಹಿಂದೆ ಸದುದ್ದೇಶ ಇರಬೇಕು. ಆದರೆ ಇಂದು ಕೆಲವರಿಗೆ ಅದು ಫ್ಯಾಷನ್ ಆಗಿದೆ. ಯಾರನ್ನೋ ಮುಗಿಸಲು ಸೇವೆಯ ಹೆಸರಿನಲ್ಲಿ ಮತಾಂತರ ಮಾಡುವುದು ಒಪ್ಪತಕ್ಕ ವಿಷಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಸೇವೆಯ ಹೆಸರಿನಲ್ಲಿ ಕ್ರೈಸ್ತ ಮಿಷನರಿಗಳ ವಿವಿಧ ಸಂಘಟನೆಗಳು ವ್ಯವಸ್ಥಿತವಾಗಿ ಅನಕ್ಷರಸ್ಥರನ್ನು ಮತಾಂತರ ಮಾಡುತ್ತಿವೆ ಎಂದು ಆಪಾದಿಸಿದ ಅವರು, ಸೇವೆ ಎನ್ನುವುದು ಜನರನ್ನು ಸಮೃದ್ದಗೊಳಿಸಬೇಕು ಎಂದರು.

ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾಜಕ್ಕಾಗಿ ಕಾರ್ಯನಿರ್ವಹಿಸುವವರನ್ನು, ಮಡಿಯುವವರನ್ನು ತಯಾರು ಮಾಡುತ್ತಿದೆ. ಯಾರೂ ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸದೆ, ಸಮಾಜ ಕಟ್ಟು ಕೆಲಸದಲ್ಲಿ ತೊಡಗೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ