ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇನ್ಮುಂದೆ ಮದುವೆ ನೋಂದಣಿ ಕಡ್ಡಾಯ (Wedding | Supreme court | High court | Karnataka | BJP)
Bookmark and Share Feedback Print
 
ಇನ್ನು ಮುಂದೆ ವಿವಾಹ ಜೀವನಕ್ಕೆ ಕಾಲಿಡುವ ಮೊದಲು ಮದುವೆ ನೋಂದಣಿ ಕಚೇರಿಗೆ ಹೋಗಿ ಬರುವುದು ಕಡ್ಡಾಯವಾಗಲಿದೆ. 1976ರ ಕರ್ನಾಟಕ ಮದುವೆ (ನೊಂದಣಿ ಮತ್ತು ವಿವಿಧ ನಿಬಂಧನೆ) ಕಾಯ್ದೆಯಲ್ಲಿ ಮದುವೆ ನೋಂದಣಿ ಕಡ್ಡಾಯಗೊಳಿಸುವ ನಿಯಮಗಳನ್ನು ಸೇರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಗಳು ತಿಳಿಸಿವೆ.

2006ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್, ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೂ ಮದುವೆ ನೋಂದಣಿ ಕಡ್ಡಾಯಗೊಳಿಸುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಈ ಕುರಿತು ಬಹಳ ತಡವಾಗಿ ಮಸೂದೆ ಸಿದ್ಧಪಡಿಸಿದೆ. ಬರುವ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ.

ಅದರ ಪ್ರಕಾರ ಮದುವೆ ನೋಂದಣಿಗೆ ಸರ್ಕಾರ 30 ದಿನಗಳ ಅವಕಾಶ ನೀಡಿದ್ದು, ತಪ್ಪಿದಲ್ಲಿ ದಂಡ ವಿಧಿಸಲಾಗುವುದು. ವಧು, ವರ, ಕಲ್ಯಾಣ ಮಂಟಪದ ಮಾಲೀಕರು, ಸಾಮೂಹಿಕ ಮದುವೆ ಆಯೋಜಕರು ಮದುವೆ ಕಾಯ್ದೆ ನಿಯಮಗಳ ವ್ಯಾಪ್ತಿಗೆ ಬರುತ್ತಾರೆ. ಅಂದರೆ ಮದುವೆ ನೋಂದಣಿ ಆಗದೇ ಇದ್ದಲ್ಲಿ ಇವರೆಲ್ಲರಿಗೂ ದಂಡ ಖಚಿತ.
ಸಂಬಂಧಿತ ಮಾಹಿತಿ ಹುಡುಕಿ