ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೊನೆಗೂ ಸಹನಾ-ತೌಫಿಕ್ ವಿವಾಹ ಪ್ರಕರಣ ಸುಖಾಂತ್ಯ (Love jihad | Bhajrang dal | sahana | Toufiq | High court)
Bookmark and Share Feedback Print
 
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿ ವಿವಾದಕ್ಕೆ ಕಾರಣವಾಗಿದ್ದ ತೀರ್ಥಹಳ್ಳಿಯ ಸಹನಾ ಮತ್ತು ತೌಫಿಕ್ ವಿವಾಹ ಪ್ರಕರಣ ಕೊನೆಗೂ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ.

ಸೋಮವಾರ ಸಹನಾ ಮತ್ತು ತೌಫಿಕ್ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದರು. ತಾನು ರಾಯಚೂರಿನಲ್ಲಿ ತೌಫಿಕ್ ಜತೆ ವಿವಾಹವಾಗಿದ್ದು, ನನ್ನಿಚ್ಛೆಯಂತೆಯೇ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ನ್ಯಾಯಾಧೀಶರಿಗೆ ಸಹನಾ ಸ್ಪಷ್ಟನೆ ನೀಡಿದ್ದಳು.

ಪ್ರಕರಣದ ಕುರಿತಂತೆ ಸಹನಾ ವಿವರಣೆ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಇಬ್ಬರೂ ಪ್ರಾಪ್ತ ವಯಸ್ಕರಾಗಿರುವುದರಿಂದ ವಿವಾಹ ಊರ್ಜಿತವಾಗಿರುವುದಾಗಿ ಹೇಳಿದ ಪೀಠ, ಇಬ್ಬರು ಜೊತೆಯಾಗಿ ಬಾಳಲು ಸಮ್ಮತಿ ಸೂಚಿಸುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

ತೀರ್ಥಹಳ್ಳಿಯ ನಿವಾಸಿಯಾಗಿರುವ ಸಹನಾ ಮತ್ತು ತೌಫಿಕ್ ಇಬ್ಬರೂ ಡಿಸೆಂಬರ್ 1ರಂದು ನಾಪತ್ತೆಯಾಗಿದ್ದರು. ನಂತರ ಡಿಸೆಂಬರ್ 4ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪತ್ತೆಯಾಗಿದ್ದ ಪ್ರೇಮಿಗಳು, ತಾವು ಮದುವೆ ಮಾಡಿಕೊಂಡಿರುವುದಾಗಿ ಹೇಳಿದ್ದರು.

ತದನಂತರ ತೀರ್ಥಹಳ್ಳಿಯ ಠಾಣೆಯಲ್ಲಿ ತೌಫಿಕ್ ವಿರುದ್ಧ ಅಪಹರಣದ ಪ್ರಕರಣ ದಾಖಲಾಗಿತ್ತು. ಸಿಂಧನೂರಿನಿಂದ ಅವರನ್ನು ಕರೆತಂದ ಪೊಲೀಸರು ಇಬ್ಬರನ್ನೂ ಅವರವರ ಪೋಷಕರಿಗೆ ಒಪ್ಪಿಸಿದ್ದರು. ನಂತರ ಸಹನಾ ಕಾಣೆಯಾಗಿದ್ದು, ತನ್ನ ಪತ್ನಿ ಸಹನಾಳನ್ನು ಹುಡುಕಿ ಕೊಡುವಂತೆ ತೌಫಿಕ್ ಹೈಕೋರ್ಟ್ ಮೊರೆ ಹೋಗಿದ್ದ.

ಈ ಎಲ್ಲಾ ರಾದ್ಧಾಂತಗಳ ನಡುವೆಯೇ ಸಹನಾ ಅಲಿಯಾಸ್ ಸುಹಾನಾ ಹಿಂದು ಧರ್ಮದ ಪದ್ಧತಿಯಂತೆ ಇಂಜಿನಿಯರ್ ಪದವೀಧರ ಹುಡುಗನೊಂದಿಗೆ ವಿವಾಹವಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿತ್ತು. ಆದರೆ ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸಹನಾ-ತೌಫಿಕ್ ವಿವಾಹ ಪ್ರಕರಣ ಸುಖಾಂತ್ಯಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ