ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಜೆಟ್ ನಂತರ ನಿಗಮ ಮಂಡಳಿಗೆ ನೇಮಕ: ಈಶ್ವರಪ್ಪ (Ishwarappa | Budget | Udupi | Yeddyurappa | Sadananda gowda)
Bookmark and Share Feedback Print
 
ಬಜೆಟ್ ಅಧಿವೇಶನ ಮುಗಿದ ಬಳಿಕ ನಿಗಮ ಮಂಡಳಿಗಳಿಗೆ ನೇಮಕಾತಿ ನಡೆಯಲಿದೆ ಎಂದು ಬಿಜಿಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಘಟಕ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಎಲ್ಲ ಜಿಲ್ಲೆಗಳಿಗೂ ಪ್ರಾಧಾನ್ಯತೆ ನೀಡಿ, ಯಾವ ಜಿಲ್ಲೆಗೆ ಸಚಿವ ಸ್ಥಾನಮಾನ ದೊರಕಿಲ್ಲವೋ ಅಲ್ಲಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದ ಅವರು, ಚುನಾಯಿತ ಪ್ರತಿನಿಧಿಗಳು ಮಂತ್ರಿಗಳಾಗಬೇಕು ಎನ್ನುವುದು, ಅದಕ್ಕೂ ಹೆಚ್ಚಿನ ಸ್ಥಾನಮಾನ ಬಯಸುವುದು ಸಹಜ. ಆದರೆ ಹೊಸ ಸ್ಥಾನಮಾನ ಬಯಸಲು ಇತಿಮಿತಿ ಇರಬೇಕು ಎಂದು ಸಲಹೆ ನೀಡಿದರು.

ಶಿಸ್ತಿನ ಪಕ್ಷವೆಂದು ಹೆಸರಾಗಿರುವ ಬಿಜೆಪಿಯಲ್ಲಿ ಇನ್ನು ಮುಂದೆ ಅಶಿಸ್ತಿಗೆ ಅವಕಾಶವಿಲ್ಲ. ಈ ಹಿಂದೆ ಸ್ವಲ್ಪ ಮಟ್ಟಿಗೆ ಪಕ್ಷದಲ್ಲಿ ಅಶಿಸ್ತು ಇತ್ತು. ಇನ್ನು ಮುಂದೆ ನೂರಕ್ಕೆ ನೂರರಷ್ಟು ಶಿಸ್ತಿನಿಂದ ನಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ