ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉಲ್ಟಾ ಹೊಡೆದ ಆಯೋಗ: ಸಂಘ ಪರಿವಾರ ಹೊಣೆ ಅಂತ ಹೇಳಿಲ್ಲ (Church attack | BJP | Congress | Yeddyurappa | JDS)
Bookmark and Share Feedback Print
 
ರಾಜ್ಯದ ವಿವಿಧೆಡೆ ನಡೆದ ಚರ್ಚ್ ದಾಳಿಯ ಹಿಂದೆ ಸಂಘ ಪರಿವಾರದ ಸಂಘಟನೆಗಳು ಶಾಮೀಲಾಗಿರುವುದಾಗಿ ನ್ಯಾ.ಸೋಮಶೇಖರ ನೇತೃತ್ವದ ಆಯೋಗ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಮಾಹಿತಿಯನ್ನು ಹೊರ ಹಾಕಿದ್ದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟ ಬೆನ್ನಲ್ಲೇ, ಇದೀಗ ಆಯೋಗ ಯು ಟರ್ನ್ ಹೇಳಿಕೆ ನೀಡಿದೆ.

2008ರಲ್ಲಿ ರಾಜ್ಯದ 14ಜಿಲ್ಲೆಗಳಲ್ಲಿ ನಡೆದ ಚರ್ಚ್, ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಕುರಿತಂತೆ ವಿಚಾರಣೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ ಯಾವುದೇ ನಿರ್ದಿಷ್ಟ ಸಂಘಟನೆಗಳ ಮೇಲೆ ಅಥವಾ ಜಿಲ್ಲಾಡಳಿತಗಳ ವಿರುದ್ಧ ಆರೋಪ ಹೊರಿಸಿಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಈ ಮೊದಲು ಚರ್ಚ್ ದಾಳಿಯಲ್ಲಿ ಬಜರಂಗದಳ, ಶ್ರೀರಾಮಸೇನೆ, ವಿಎಚ್‌ಪಿ ಸಂಘಟನೆಗಳು ಶಾಮೀಲಾಗಿದ್ದು, ಅವರೊಂದಿಗೆ ಪೊಲೀಸರು ಕೂಡ ಕೈಜೋಡಿಸಿರುವುದಾಗಿ ಮಧ್ಯಂತರ ವರದಿ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತ ನ್ಯಾ.ಸೋಮಶೇಖರ್ ತಿಳಿಸಿದ್ದರು. ಆದರೆ ಈ ಅಂಶ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ.ಸೋಮಶೇಖರ ಪರವಾಗಿ ಆಯೋಗದ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ.

ದಾಳಿ ಕುರಿತಂತೆ ಆಯೋಗ ವರದಿಯನ್ನು ಬಹಿರಂಗಪಡಿಸಿಲ್ಲ. ಅದರ ಪ್ರಮುಖ ಅಂಶಗಳನ್ನು ಮಾತ್ರ ತಿಳಿಸಿದೆ. ಆದರೆ ಈ ಬಗ್ಗೆ ವಿವರಣೆ ನೀಡಲು ಮಾಧ್ಯಮದವರನ್ನು ಪ್ರತ್ಯೇಕವಾಗಿ ಆಹ್ವಾನಿಸಿಲ್ಲ ಎಂದು ಸಮಜಾಯಿಷಿ ನೀಡಿದೆ.

ಆ ನಿಟ್ಟಿನಲ್ಲಿ ಆಯೋಗದ ವಿರುದ್ಧ ಕೇಳಿ ಬರುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆಯೋಗದಿಂದ ಯಾವುದೇ ರೀತಿಯ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ ಎಂದು ಆಯೋಗ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ