ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ರೈತರಿಗೆ ಜೈಲು, ಗಣಿಧಣಿಗಳ ಕೇಸು ವಾಪಸ್; ಇದು ಸರ್ಕಾರದ ನೀತಿ' (Karnataka | BJP govt | Bellary | Janardhana Reddy)
Bookmark and Share Feedback Print
 
ಬಳ್ಳಾರಿ ರೆಡ್ಡಿ ಸಹೋದರ ಸಚಿವರುಗಳ ಮೇಲಿನ ಮೂರು ಪ್ರಕರಣಗಳನ್ನು ರಾಜ್ಯ ಸರಕಾರ ಸಂಪುಟದ ಒಪ್ಪಿಗೆಯೊಂದಿಗೆ ಬುಧವಾರ ಹಿಂದಕ್ಕೆ ಪಡೆದಿದೆ. ಬಳ್ಳಾರಿ ಸಚಿವರುಗಳು ತಮ್ಮ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆದರೇ ಹೊರತು, ಅದೇ ಜಿಲ್ಲೆಯ ರೈತರ ಮೇಲೆ ದಾಖಲಾಗಿರುವ ನಾಲ್ಕು ಪ್ರಕರಣಗಳ ಕುರಿತು ಸೊಲ್ಲೆತ್ತಿಲ್ಲ. ಇದು ಬಿಜೆಪಿ ಸರಕಾರದ ರೈತವಿರೋಧಿ ನೀತಿಗೆ ಮತ್ತೊಂದು ಉದಾಹರಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವರ ಬಿ. ಶ್ರೀರಾಮುಲು ಅವರ ವಿರುದ್ಧ ಈ ಹಿಂದೆ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಸರಕಾರ ಬುಧವಾರ ಹಿಂದಕ್ಕೆ ಪಡೆದಿದೆ. ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣವೊಂದನ್ನೂ ಹಿಂದಕ್ಕೆ ಪಡೆಯಲಾಗಿದೆ.

ಆದರೆ ನಮ್ಮ ಮೇಲೆ ದಾಖಲಿಸಲಾಗಿರುವ ಸುಳ್ಳು ಕೇಸುಗಳನ್ನು ವಾಪಸ್ ಪಡೆಯದೆ ಸಚಿವರುಗಳು ತಮ್ಮ ಒಳಿತನ್ನಷ್ಟೇ ನೋಡಿಕೊಂಡಿದ್ದಾರೆ. ಇದು ರಾಜ್ಯ ಸರಕಾರದ ದ್ವಂದ್ವ ಮತ್ತು ರೈತ ವಿರೋಧಿ ನೀತಿಗೆ ಅತ್ಯುತ್ತಮ ಉದಾಹರಣೆ ಎಂದು ರೈತರು ದೂರಿದ್ದಾರೆ.

ನಾವು ಜನಸಮಾನ್ಯರು, ರೈತರು ಮತ್ತು ಅವರಿಗೆ ಅಧಿಕಾರ ಕೊಟ್ಟವರು. ಅವರು ಜನತೆಗಾಗಿ ಕೆಲಸ ಮಾಡದೆ ತಮ್ಮ ಅಧಿಕಾರವನ್ನು ವೈಯಕ್ತಿಕ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜ್ಯದ ಜನತೆಗೆ ಮಾದರಿಯಾಗ ಬೇಕಾದವರು ತಮ್ಮ ಮೇಲಿನ ಪ್ರಕರಣಗಳನ್ನಷ್ಟೇ ಹಿಂದಕ್ಕೆ ಪಡೆಸುವಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದು ವಿಮಾನ ನಿಲ್ದಾಣ ವಿರೋಧಿ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ ಆರೋಪಿಸಿದ್ದಾರೆ.

ಬಳ್ಳಾರಿಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಚಾಗನೂರು, ಸಿರಿವಾರ ಸೇರಿದಂತೆ ಸುಮಾರು ಎಂಟು ಪ್ರದೇಶಗಳಲ್ಲಿ ಜಾಗ ಅತಿಕ್ರಮಣ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದಾಗ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನೂರಾರು ರೈತರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಪೊಲೀಸರ ಮೇಲೆ ಹಲ್ಲೆ ಮತ್ತು ಹತ್ಯಾ ಯತ್ನ ನಡೆಸಲಾಗಿದೆ ಎಂದು 15-2-2009ರಲ್ಲಿ ಸುಮಾರು 250 ಜನರ ಕೇಸು ಹಾಕಲಾಗಿತ್ತು. ಅವರಲ್ಲಿ 11 ಜನರನ್ನು ಬಂಧಿಸಿ 12 ದಿನ ಜೈಲಿನಲ್ಲಿಡಲಾಗಿತ್ತು. 40 ಮಂದಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಉಳಿದಂತೆ ಸರ್ವೆಯವರನ್ನು ಅಪಹರಣ ಯತ್ನ ನಡೆಸಲಾಗಿದೆ ಎಂದು 21 ರೈತರ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲೂ ಎಂಟು ದಿನಗಳ ಕಾಲ ರೈತರು ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಬಳಿಕ ದರೋಡೆ, ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಮತ್ತು ಹಲ್ಲೆ ನಡೆಸಿರುವುದು ಮುಂತಾದ ಹಲವು ಕೇಸುಗಳನ್ನು ದಾಖಲಿಸಲಾಗಿದೆ.

ಆದರೆ ಇದ್ಯಾವ ಕೇಸುಗಳನ್ನೂ ವಾಪಸ್ ಪಡೆಯುವ ಬದಲು ಕೇವಲ ಬಳ್ಳಾರಿ ಗಣಿಧಣಿ ಸಚಿವರುಗಳನ್ನು ಓಲೈಸುವ ನಿಟ್ಟಿನಿಂದ ಅವರ ಪ್ರಕರಣಗಳನ್ನು ರದ್ದು ಮಾಡಲಾಗಿದೆ. ನಾವೇನೂ ವೈಯಕ್ತಿತ ಕಾರಣಗಳಿಗಾಗಿ ಹೋರಾಟ ನಡೆಸಿದವರಲ್ಲ. ಆದರೂ ಸರಕಾರ ದ್ವಂದ್ವ ನೀತಿ ಅನುಸರಿಸಿದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ