ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುತಾಲಿಕ್‌ಗೆ ಮಸಿ: ಕಾಂಗ್ರೆಸ್ ಅಲ್ಲ ಎಂದ ಡಿಕೆಶಿಗೆ ತೇಜಸ್ವಿನಿ ಸೆಡ್ಡು (Shiv kumar | Thejaswini | BJP | Congress | Sri rama sene)
Bookmark and Share Feedback Print
 
NRB
ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಾಗಿ ಘೋಷಿಸಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವುದು ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದು, ಒಂದು ವೇಳೆ ಕಾಂಗ್ರೆಸ್‌ನ ಸ್ವಾಭಿಮಾನ ಕೆಣಕಿದರೆ ಎಚ್ಚರ ಎಂಬ ಸಂದೇಶವನ್ನು ಶ್ರೀರಾಮಸೇನೆಗೆ ರವಾನಿಸಿದ್ದಾರೆ. ಮತ್ತೊಂದೆಡೆ ಡಿಕೆಶಿ ಬೆಂಬಲಿಗರೇ ಈ ಕೃತ್ಯ ನಡೆಸಿರುವುದಾಗಿ ಕಾಂಗ್ರೆಸ್‌ನ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ.

ಗುರುವಾರ ಸಂಜೆ ನಗರದ ಟೌನ್ ಹಾಲ್ ಸಮೀಪದ ಸಂಸ ಬಯಲು ರಂಗಮಂದಿರದಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದು ಏರ್ಪಡಿಸಿದ್ದ ಪ್ರೇಮಿಗಳ ದಿನಾಚರಣೆ ಬೇಕೆ ಅಥವಾ ಬೇಡವೇ ಎಂಬ ಸಂವಾದದ ಸಂದರ್ಭದಲ್ಲಿ ಮುತಾಲಿಕ್ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಿಕೊಂಡ ಗುಂಪೊಂದು ದಾಳಿ ನಡೆಸಿ ಮುಖಕ್ಕೆ ಮಸಿ ಬಳಿದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಮುತಾಲಿಕ್ ಅವರ ಮುಖಕ್ಕೆ ಯುವ ಕಾಂಗ್ರೆಸಿಗರು ಮಸಿ ಬಳಿದಿದ್ದಾರೆಂದು ಕೆಲವು ಮಾಧ್ಯಮಗಳು ಮತ್ತು ಶ್ರೀರಾಮಸೇನೆ ಸೇರಿದಂತೆ ಹಲವರು ಆರೋಪಿಸುತ್ತಿದ್ದಾರೆ. ಇದು ಕಾಂಗ್ರೆಸಿಗರ ಕೃತ್ಯವಲ್ಲ. ನಮ್ಮ ಪಕ್ಷಕ್ಕೆ ನಮ್ಮದೇ ಆದ ಸಿದ್ದಾಂತವಿದೆ. ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಇಟ್ಟಂತಹ ಪಕ್ಷವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಒಂದು ವೇಳೆ ಕಾಂಗ್ರೆಸ್ ಪಕ್ಷದ ಸ್ವಾಭಿಮಾನ ಕೆಣಕಿದರೆ ಯಾರನ್ನೂ ಬಿಡುವುದಿಲ್ಲ ಎಂಬುದಾಗಿಯೂ ಈ ಸಂದರ್ಭದಲ್ಲಿ ಎಚ್ಚರಿಸಿದರು.

NRB
ಡಿಕೆಶಿ ಬೆಂಬಲಿಗರೇ ಮಸಿ ಬಳಿದಿದ್ದು-ತೇಜಸ್ವಿನಿ: ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯ ಹಿಂದೆ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರ ಕೈವಾಡ ಇರುವುದಾಗಿ ಸ್ವತಃ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ದೂರಿದ್ದಾರೆ.

ಸಮಯಸಾಧಕ ರಾಜಕಾರಣ ಮಾಡುವ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರೇ ಈ ಕೃತ್ಯ ಮಾಡಿದ್ದಾರೆಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ