ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಮಾರಸ್ವಾಮಿ ಜಂಟಲ್‌ಮ್ಯಾನ್, ಗೌಡರದ್ದು ಸ್ವಾರ್ಥ: ಖೇಣಿ (HD Kumaraswamy | HD Devegowda | Ashok Kheni | NICE)
Bookmark and Share Feedback Print
 
ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದ ಎಚ್.ಡಿ. ಕುಮಾರಸ್ವಾಮಿ ಜಂಟಲ್‌ಮ್ಯಾನ್, ಆದರೆ ದೇವೇಗೌಡರು ತಮ್ಮ ಸ್ವಾರ್ಥಕ್ಕಾಗಿ ಅವರನ್ನು ಬಲಿ ತೆಗೆದುಕೊಂಡರು ಎಂದು ನೈಸ್ ಮುಖ್ಯಸ್ಥ ಅಶೋಖ್ ಖೇಣಿ ಹೇಳಿದ್ದಾರೆ.

'ಕನ್ನಡ ಪ್ರಭ' ಪತ್ರಿಕೆ ಜತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ಯೋಜನೆಯ ಬಗೆಗಿನ ವಿವಾದಗಳು ಏನೇ ಇರಲಿ, ಆದರೆ ಕುಮಾರಸ್ವಾಮಿಯವರು ಉತ್ತಮ ರಾಜಕಾರಣಿಯಾಗಿದ್ದರು; ಅವರು ಇನ್ನೂ ಕೆಲವು ತಿಂಗಳುಗಳ ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಅತ್ಯುತ್ತಮ ಕೆಲಸ ಮಾಡುವ ಅವಕಾಶವಿತ್ತು. ಆದರೆ ಗೌಡರು ಅದಕ್ಕೆ ಅವಕಾಶ ನೀಡದೆ ಅವರನ್ನು ಬಲಿ ಪಡೆದುಕೊಂಡರು ಎಂದು ವಿಶ್ಲೇಷಿಸಿದ್ದಾರೆ.

ನಂತರ ಗೌಡರ ಟೀಕೆಗಳಿಗೆ ಉತ್ತರಿಸಿದ ಖೇಣಿ, ಅವರಲ್ಲಿರುವ ದಾಖಲೆಗಳೆಲ್ಲ ಸುಳ್ಳು; ಬೇಕಾದರೆ ನನ್ನನ್ನು ಮತ್ತು ಗೌಡರ ಕುಟುಂಬದವರನ್ನು ಒಂದೇ ಕಡೆ ಮಲಗಿಸಿ ಸುಳ್ಳುಪತ್ತೆ ಯಂತ್ರದ ಮೂಲಕ ಪರೀಕ್ಷೆ ನಡೆಸಲಿ. ಇದನ್ನು ಟೀವಿಗಳು ನೇರ ಪ್ರಸಾರ ಮಾಡಲಿ. ಆಗ ಜನರೆದುರು ಗೌಡರ ಬಣ್ಣ ಬಿಚ್ಚುಚ್ಚೇನೆ. ಇದು ಸಾಧ್ಯವಾಗದಿದ್ದರೆ ನೈಸ್ ರಸ್ತೆಯಲ್ಲಿ ಗೌಡರ ಜಾತಕ ಬಯಲು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ನಾವು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ವಿವಾದ ಸೃಷ್ಟಿಸುತ್ತಿರುವವರು ಗೌಡರು ಮಾತ್ರ. ಅವರು ಜೀವನ ಪರ್ಯಂತ ಸುಳ್ಳುಗಳನ್ನೇ ಹೇಳುತ್ತಾ ಬಂದವರು. ಹಾಸನದಿಂದ ಕುರಿಗಳೊಂದಿಗೆ ಬಂದ ದೇವೇಗೌಡರ ಕುಟುಂಬವೀಗ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದು ಹೇಗೆ? ಇಂತಹ ಅವರದೇ ಅಕ್ರಮಗಳನ್ನು ಮುಚ್ಚಿ ಹಾಕಲು ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಗೌಡರ ಮೇಲೆ ವಾಗ್ದಾಳಿ ನಡೆಸಿದರು.

ಕಳೆದ ಹಲವಾರು ವರ್ಷಗಳಿಂದ ನನ್ನ ಮೇಲೆ ಆರೋಪಗಳ ಸುರಿಮಳೆಯನ್ನೇ ಅವರು ಸುರಿಸುತ್ತಿದ್ದಾರೆ. ಇದನ್ನು ಕಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಒಂದೋ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಕೇಸ್ ಹಾಕುತ್ತೇನೆ. ಅದರಲ್ಲಿ ಬರುವ ಹಣವನ್ನು ನೈಸ್ ವ್ಯಾಪ್ತಿಯ ದೇವಾಲಯ, ಸಮುದಾಯ ಭವನ, ಮಕ್ಕಳ ಶಿಕ್ಷಣ ಮತ್ತಿತರ ಸಮಾಜ ಸೇವೆಗೆ ಬಳಸುತ್ತೇನೆ ಎಂದು ಖೇಣಿ ತಿಳಿಸಿದ್ದಾರೆ.

ನಿಮ್ಮನ್ನು ಗೌಡರು ಹರ್ಷದ್ ಮೆಹ್ತಾರಿಗಿಂತಲೂ ದೊಡ್ಡ ವಂಚಕ ಎಂದು ಕರೆದಿದ್ದಾರಲ್ಲವೇ ಎಂಬ ಪ್ರಶ್ನೆಗೆ, ದಾವೂದ್ ಇಬ್ರಾಹಿಂ, ಮೆಹ್ತಾ ಮುಂತಾದವರ ಜತೆ ಗೌಡರಿಗೆ ನೇರ ಸಂಪರ್ಕವಿರಬಹುದೆಂಬ ಅನುಮಾನ ನನ್ನದು; ಇದನ್ನು ಮುಚ್ಚಿಡಲೆಂದು ನನ್ನನ್ನು ಅವರೊಂದಿಗೆ ಹೋಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ