ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೇಶ್ಯಾವಾಟಿಕೆ ಅಧಿಕೃತಗೊಳಿಸಿ: ಸರ್ಕಾರಕ್ಕೆ ಜೆಡಿಎಸ್ ಶಾಸಕ (Prostitutes | Chitradurga | JDS | Basavarajan | Deve gowda)
Bookmark and Share Feedback Print
 
ವೇಶ್ಯಾವಾಟಿಕೆಯನ್ನು ಅಧಿಕೃತಗೊಳಿಸುವಂತೆ ಚಿತ್ರದುರ್ಗದ ಜೆಡಿಎಸ್ ಶಾಸಕ ಎಸ್.ಕೆ.ಬಸವರಾಜನ್ ರಾಜ್ಯ ಸರ್ಕಾರವವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಶ್ಯಾವಾಟಿಕೆಯನ್ನು ಅಧಿಕೃತಗೊಳಿಸುವ ಮೂಲಕ ಲೈಂಗಿಕ ಅತೃಪ್ತರಿಗೆ ಸಹಾಯಕವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಅಲ್ಲದೆ, ವೇಶ್ಯಾವಾಟಿಕೆಯನ್ನು ಅಧಿಕೃತಗೊಳಿಸಿದರೆ ಲೈಂಗಿಕವಾಗಿ ನಡೆಯುವ ದೌರ್ಜನ್ಯಕ್ಕೆ ಕಠಿವಾಣ ಹಾಕಲು ಸಾಧ್ಯವಾಗುತ್ತದೆ ಎಂದಿರುವ ಬಸವರಾಜನ್, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವೇಶ್ಯಾವಾಟಿಕೆಯನ್ನು ಅಧಿಕೃತಗೊಳಿಸಲು ಮುಂದಾಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು. ವೇಶ್ಯಾವಾಟಿಕೆಯನ್ನು ಅಧಿಕೃತಗೊಳಿಸುವ ಕುರಿತು ವಿಧಾನಮಂಡಲದ ಅಧಿವೇಶನದಲ್ಲೂ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ