ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆದರಿಕೆ ನಡುವೆ ನಿರ್ವಿಘ್ನವಾಗಿ ನಡೆದ 'ಪ್ರೇಮಿಗಳ ದಿನ' (Sri rama sene | Muthalik | Police | Bidari | Valentine's Day)
Bookmark and Share Feedback Print
 
ಪ್ರೇಮಿಗಳ ದಿನಾಚರಣೆಗೆ (ಫೆ.14)ಅಡ್ಡಿಪಡಿಸುವುದಾಗಿ ಶ್ರೀರಾಮಸೇನೆ ಎಚ್ಚರಿಕೆ ನೀಡಿದ ನಡುವೆಯೇ ರಾಜ್ಯದಲ್ಲಿ ಯಾವುದೇ ಗೊಂದಲವಿಲ್ಲದೆ ಪ್ರೇಮಿಗಳ ದಿನಾಚರಣೆ ನಿರ್ವಿಘ್ನವಾಗಿ ನಡೆಯಿತು.

ಪ್ರೇಮಿಗಳ ದಿನಾಚರಣೆಯಂದು ಸೆರೆಸಿಗುವ ಜೋಡಿಗಳಿಗೆ ಸ್ಥಳದಲ್ಲಿಯೇ ಮದುವೆ ಮಾಡಿಸುವುದಾಗಿ ಶ್ರೀರಾಮಸೇನೆ ಬೆದರಿಕೆ ಹಾಕಿತ್ತು. ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಮುತಾಲಿಕ್ ಧೋರಣೆಯಿಂದ ಅಸಮಾಧಾನಗೊಂಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತಾಲಿಕೆ ಮುಖಕ್ಕೆ ಮಸಿ ಬಳಿದ ಘಟನೆಯೂ ನಡೆದಿತ್ತು.

ಈ ಎಲ್ಲಾ ಗೊಂದಲಗಳ ನಡುವೆ ಭಾನುವಾರ ಪ್ರೇಮಿಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರೇಮಿಗಳ ದಿನಾಚರಣೆ ಆಚರಿಸಿ ಖುಷಿಪಟ್ಟರು. ಹಾವೇರಿಯಲ್ಲಿ ಶ್ರೀರಾಮಸೇನೆ ಪ್ರೇಮಿಗಳಿಗೆ ರಾಖಿ ಕಟ್ಟಿಸುವ ಮೂಲಕ ಅಡ್ಡಿಪಡಿಸಿದ ಘಟನೆ ನಡೆಯಿತು.
ಮಡಿಕೇರಿಯಲ್ಲಿ ಎರಡು ವರ್ಷಗಳಿಂದ ಪ್ರೇಮಿಸುತ್ತಿದ್ದ ಪ್ರೇಮಿಗಳಿಗೆ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಾಹ ನೆರವೇರಿಸಿದರು.ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಆನೇಕಲ್‌ನಲ್ಲಿ ಪ್ರೇಮಿಗಳ ದಿನದಂದು ಕರವೇ ಮುಖಂಡ ಲೋಕೇಶ್ ಮುಂದಾಳತ್ವದಲ್ಲಿ ದೀಪಾ ಮತ್ತು ರಮೇಶ್ ಎಂಬ ಪ್ರೇಮಿಗಳ ವಿವಾಹ ಮಾಡಿಸಿದರು.

ಅಲ್ಲದೇ, ರಾಮನಗರದ ಚನ್ನಪಟ್ಟಣದಲ್ಲಿ ಪ್ರಿಯಕರನಿಂದ ವಂಚಿಸಲ್ಪಟ್ಟ ಯುವತಿ ಭಾನುವಾರ ಆತ್ಮಹತ್ಯೆಗೆ ಶರಣಾದ ಘಟನೆ ನಡೆಯಿತು. ಮಂಡ್ಯದಲ್ಲಿ ಪೋಷಕರ ವಿರೋಧದಿಂದಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.

ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತರಾದ ಶಂಕರ ಬಿದರಿ ಎಚ್ಚರಿಕೆ ನೀಡಿದ್ದು, ಪ್ರೇಮಿಗಳು ನಿರಾಂತಕವಾಗಿ ಪ್ರೇಮಿಗಳ ದಿನ ಆಚರಿಸಬಹುದು ಎಂದು ಅಭಯ ನೀಡಿದ್ದರು. ಆ ನಿಟ್ಟಿನಲ್ಲಿ ಭಾನುವಾರ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಏತನ್ಮಧ್ಯೆ ಕರವೇ, ಜಯಕರ್ನಾಟಕ ಸೇರಿದಂತೆ ಹಲವಾರು ಸಂಘಟನೆಗಳು ಪ್ರೇಮಿಗಳ ದಿನಾಚರಣೆಗೆ ಬೆಂಬಲ ಸೂಚಿಸಿದ್ದನ್ನು ಸ್ಮರಿಸಿಕೊಳ್ಳಬಹುದು
ಸಂಬಂಧಿತ ಮಾಹಿತಿ ಹುಡುಕಿ