ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೈಸ್‌ಗೆ ಹೆಚ್ಚು ಭೂಮಿ ನೀಡುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ (Nice | BJP | Yeddyurappa | Deve gowda | Supreme court | High court)
ನೈಸ್‌ಗೆ ಹೆಚ್ಚು ಭೂಮಿ ನೀಡುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ
ನವದೆಹಲಿ, ಮಂಗಳವಾರ, 16 ಫೆಬ್ರವರಿ 2010( 11:48 IST )
ನೈಸ್ ಯೋಜನೆ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅನಾವಶ್ಯಕವಾಗಿ ವಿವಾದ ಹುಟ್ಟು ಹಾಕುತ್ತಿದ್ದಾರೆಂದು ಆರೋಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ 20,193ಎಕರೆಗಳಿಗಿಂತ ಒಂದಿಂಚೂ ಹೆಚ್ಚಿಗೆ ಭೂಮಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ನೈಸ್ ವಿಚಾರಕ್ಕೆ ಸಂಬಂಧಿಸಿದಂತೆ ದೇವೇಗೌಡರು ಕರೆದಿರುವ ರೈತರ ಸಮಾವೇಶಕ್ಕೆ ತಾವು ಹಾಜರಾಗುವುದಿಲ್ಲ ಎಂದು ತಿಳಿಸಿರುವ ಮುಖ್ಯಮಂತ್ರಿ, ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಒಪ್ಪಿರುವಾಗ ಅಲ್ಲಿಗೆ ಹೋಗುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ನೈಸ್ ಯೋಜನೆ ಕುರಿತಂತೆ ಹಿಂದಿನ ಸರ್ಕಾರಗಳು ಏನೆಲ್ಲಾ ತಪ್ಪು ಮಾಡಿವೆ ಎಂಬುದನ್ನು ನಾನು ಒತ್ತಿ ಹೇಳಲ್ಲ. ಆದರೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ನೈಸ್ ವಿಚಾರ ಕುರಿತ ಚರ್ಚೆಗೆ ನಾನು ಸಿದ್ಧ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ತುಂಬಾ ಹಿರಿಯರು ಅವರ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರ ಸಮಸ್ಯೆಗಳ ಕುರಿತು ಪ್ರವಾಸ ಕೈಗೊಂಡು ನೀಡುವ ಸಲಹೆ-ಸೂಚನೆಯನ್ನು ತಾವು ಸ್ವೀಕರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.