ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವ್ಯಕ್ತಿ ಸತ್ತು 7ವರ್ಷವಾದ ನಂತ್ರ ವಾರಂಟ್ ಜಾರಿ! (Bangalore | Police | Court | Warrent)
Bookmark and Share Feedback Print
 
ಅಕ್ರಮವಾಗಿ ನೀರಾ ಸಂಗ್ರಹಿಸಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಿಸಿ, ಆತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ಕೂಡಲೇ ಬಂಧಿಸುವಂತೆ ವಾರಂಟ್ ಜಾರಿ ಮಾಡಿತ್ತು. ವಿಚಿತ್ರವೆಂದರೆ ವಾರಂಟ್ ಹೊರಡಿಸಿದ್ದ ವ್ಯಕ್ತಿ ಸತ್ತು 7ವರ್ಷವಾಗಿದೆ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ!

ಹುಣಸೂರು ತಾಲೂಕಿನ ಬೆಳ್ತೂರು ಗ್ರಾಮದಲ್ಲಿ ಅಕ್ರಮವಾಗಿ ಶೇಂದಿ ಸಂಗ್ರಹಿಸುತ್ತಿದ್ದರೆಂದು ಅಬಕಾರಿ ಇಲಾಖೆ 2009ರ ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಪೊಲೀಸ್ ಇಲಾಖೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿ, ಹುಣಸೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಅದರಲ್ಲಿ ಆರೋಪಿ ಜವರಾಯಪ್ಪ ಕೂಡ ಸೇರಿದ್ದರು. ಆದರೆ ಜವರಾಯಪ್ಪನ ವಿರುದ್ಧ ಪ್ರಕರಣ ದಾಖಲಿಸುವ 7ವರ್ಷದ ಮೊದಲೇ ಮೃತರಾಗಿದ್ದರು.

ಜವರಾಯಪ್ಪ ಅವರು 2002ರ ಡಿಸೆಂಬರ್ 26ರಂದು ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಕೂಡಲೇ ಜವರಾಯಪ್ಪ ಅವರನ್ನು ಬಂಧಿಸುವಂತೆ ಆದೇಶ ನೀಡಿತ್ತು. ಆದರೆ ಅಕ್ರಮವಾಗಿ ಶೇಂದಿ ಇಳಿಸುತ್ತಿದ್ದ ಹೊಲದ ಮಾಲೀಕನ ಹೆಸರಲ್ಲಿ ಪ್ರಕರಣ ದಾಖಲಿಸುವಂತೆ ಸರ್ಕಾರದ ಆದೇಶ ಇದ್ದ ಪರಿಣಾಮ ಈ ಅಚಾತುರ್ಯ ನಡೆದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ಉಮಾಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ