ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಬ್ಯಾಂಕ್ ಹೆಸರಲ್ಲಿ ಭೂ ಮಾಫಿಯಾಗೆ ಕುಮ್ಮಕ್ಕು: ದೇವೇಗೌಡ (Devegowda | Land Bank | Land Mafia | Ryot | Farmer | Karnataka News)
Bookmark and Share Feedback Print
 
NRB
ಬಿಜೆಪಿ ಸರಕಾರದ ಭೂ ಬ್ಯಾಂಕ್, ರೈತರ ಹೆಸರಿನಲ್ಲಿ ಭೂ ಮಾಫಿಯಾಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿದೆ ಎಂದು ಆಪಾದಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ, ಇದರ ಹಿಂದೆ ರಿಯಲ್ ಎಸ್ಟೇಟ್ ದಂಧೆಯ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರಕಾರದ ಪ್ರಸ್ತಾಪಿತ ಭೂ ಬ್ಯಾಂಕ್ ವಿರುದ್ಧ ರೈತರನ್ನು ಎತ್ತಿಕಟ್ಟುವ ಉದ್ದೇಶದಿಂದ ಒಂದು ವಾರದ 'ರೈತ ಜಾಗೃತಿ ಯಾತ್ರೆ'ಯ ಸಮಾವೇಶ ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಸಂದರ್ಭ ಅವರು ಈ ಆರೋಪ ಮಾಡಿದರು. ಯಾತ್ರೆಯನ್ನು ಎಡಪಕ್ಷಗಳು ಬೆಂಬಲಿಸುತ್ತಿವೆ.

ನನ್ನ ವಿರುದ್ಧದ ಯಾವುದೇ ತನಿಖೆಗೆ ಸಿದ್ಧ ಎಂದು ಪುನಃ ಹೇಳಿದ ದೇವೇಗೌಡರು, ಭೂ ಬ್ಯಾಂಕ್ ಹೆಸರಿನಲ್ಲಿ ರೈತರ ಜಮೀನು ಕಬಳಿಸುವುದನ್ನು ತಡೆಯುವ ಸದ್ಬುದ್ಧಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರಲಿ ಎಂದು ಆಶಿಸಿದರು.

ರಾಜ್ಯದಲ್ಲಿ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಿಜೆಪಿ ಸರಕಾರವು ಭೂ ಬ್ಯಾಂಕ್ ಸ್ಥಾಪಿಸುವ ಉದ್ದೇಶ ಪ್ರಕಟಿಸಿತ್ತು. ಭೂ ಬ್ಯಾಂಕ್‌ಗಾಗಿ ಸರಕಾರವು ರಾಜ್ಯಾದ್ಯಂತ ನೋಟಿಫೈ ಮಾಡಿರುವ 26 ಜಿಲ್ಲೆಗಳಲ್ಲಿ ಸಮಾವೇಶಗಳು ಜರುಗಲಿವೆ.
ಸಂಬಂಧಿತ ಮಾಹಿತಿ ಹುಡುಕಿ