ನೈಸ್ ಯೋಜನೆಗೆ ಸಂಬಂಧಪಟ್ಟಂತೆ ಭೂಮಿ ಸ್ವಾಧೀನ ವಿರೋಧಿಸಿ ರೈತರ ಜಾಗೃತಿ ಪ್ರವಾಸ ಆರಂಭಿಸುವ ಮುನ್ನ ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಹ್ವಾನವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿರಸ್ಕರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾತುಕತೆಗೆ ನಡೆಸಿದಾಗ ಮುಖ್ಯಮಂತ್ರಿಗಳು ಕೊಟ್ಟ ವಾಗ್ದಾನ ಏನು ಎಂದು ಲೇವಡಿ ಮಾಡಿದ್ದಾರೆ.
ಸಿಎಂ ಆಹ್ವಾನದಂತೆ ನೈಸ್ ಯೋಜನೆ ಕುರಿತು ಚರ್ಚಿಸಲು ಅವರ ಗೃಹ ಕಚೇರಿಗೆ ತೆರಳಿದಾಗ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಾರೆ ಸಮಯ ಇಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ನಾನು ಪುಷ್ಟಗುಚ್ಛ ಕೊಟ್ಟೆ ಅವರೂ ನನಗೆ ಪುಷ್ಟಗುಚ್ಛ ಕೊಟ್ಟರು. ಬರುವಾಗ ನಾನೊಬ್ಬನೆ ಬರೀಗೈಲಿ ಬರಬೇಕಾಯಿತು ಎಂದು ತಿಳಿಸಿದರು.
ನೈಸ್ ವಿವಾದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಲಿ,ಬಳಿಕ ಅವರಿಗೆ ನಾವು ಸೂಕ್ತ ಸಲಹೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.