ಗೋ ಹತ್ಯೆ ನಿಷೇಧದ ಹಿಂದೆ ಕೋಮುವಾದಿ ಅಜೆಂಡಾ: ಶ್ರೀರಾಮ ರೆಡ್ಡಿ
ಬೆಂಗಳೂರು, ಬುಧವಾರ, 17 ಫೆಬ್ರವರಿ 2010( 19:24 IST )
ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಿಪಿಐ(ಎಂ) ಮುಖಂಡ ಹಾಗೂ ಮಾಜಿ ಶಾಸಕ ಶ್ರೀರಾಮ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯಕ್ಕೆ ಮಾರಕವಾಗಲಿದೆ ಎಂದು ಅವರು ಬುಧವಾರ ನಗರದಲ್ಲಿ ನಡೆದ ಗೋಹತ್ಯೆ ನಿಷೇಧ ಕಾಯ್ದೆ, ಆಹಾರ ಸಂಸ್ಕೃತಿಯ ರಕ್ಷಣೆ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಕಾಯ್ದೆಯಿಂದ ದೇಶದ ಆಹಾರ ವೈವಿಧ್ಯತೆ ನಾಶವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೋಮುವಾದಿ ಅಜೆಂಡಾವನ್ನು ಜಾರಿಗೆ ತರುವ ಉದ್ದೇಶ ಇದರ ಹಿಂದೆ ಇದೆ ಎಂದು ಆರೋಪಿಸಿದರು.
ಜಾನುವಾರುಗಳ ರಕ್ಷಣೆ ಹಾಗೂ ಪೋಷಣೆಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಜನರಿಗೆ ಸರಿಯಾದ ಸ್ಮಶಾನವಿಲ್ಲದಿರುವ ಈ ಪರಿಸ್ಥಿತಿಯಲ್ಲಿ ಸತ್ತ ಜಾನುವಾರುಗಳನ್ನು ಹೂಳುವುದು ಹೇಗೆ ಎಂದು ಅವರು ಪ್ರಶ್ನಿಸಿದರು.