ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪುಣೆ ಸ್ಫೋಟ: ಹಂಪಿಯಲ್ಲಿ 4ಕಾಶ್ಮೀರಿಗಳು ಪೊಲೀಸ್ ವಶಕ್ಕೆ (Virapuram Gadde | Pune blasts | Kashmiri | Hampi)
Bookmark and Share Feedback Print
 
ಪುಣೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ನಾಲ್ಕು ಮಂದಿ ಕಾಶ್ಮೀರಿ ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಲ್ಲಿನ ವಿರುಪಾಪುರ ಗಡ್ಡೆ ಎಂಬ ಪ್ರದೇಶದಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಿರುವ ನಾಲ್ಕು ಮಂದಿ ಕಾಶ್ಮೀರಿ ಯುವಕರನ್ನು ಪುಣೆಯಿಂದ ಆಗಮಿಸಿದ್ದ ಪೊಲೀಸ್ ತಂಡ ವಶಕ್ಕೆ ತೆಗೆದುಕೊಂಡಿರುವುದಾಗಿ ಬುಧವಾರ ಪೊಲೀಸ್ ಮೂಲವೊಂದು ಹೇಳಿದೆ.

ಅಲ್ಲದೇ, 11ಮಂದಿ ಸಾವಿಗೆ ಕಾರಣವಾಗಿರುವ ಪುಣೆ ಸ್ಫೋಟ ಕುರಿತಂತೆ ಮತ್ತೆ ಮೂವರು ವ್ಯಕ್ತಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದು, ಆ ಕುರಿತು ಬಂಧಿತರ ಹೆಸರಾಗಲಿ, ಶೋಧ ನಡೆಸುತ್ತಿರುವವರ ಕುರಿತು ಹೆಚ್ಚಿನ ವಿವರಣೆ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಪ್ರಸಿದ್ದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇಲ್ಲಿಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗಾಗಿ ಸುಮಾರು 40ಕ್ಕೂ ಅಧಿಕ ಹೋಟೆಲ್‌ಗಳು ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿವೆ. ಹಲವಾರು ವಿದೇಶಿ ಪ್ರವಾಸಿಗರು ವಿರುಪಾಪುರದ ಹೋಟೆಲ್‌ಗಳಲ್ಲಿ ತಂಗುತ್ತಿರುವುದಾಗಿ ವಿವರಿಸಿದ್ದಾರೆ.

ಪುಣೆ ಸ್ಫೋಟದ ಹಿಂದೆ ಉತ್ತರ ಕನ್ನಡ ಭಟ್ಕಳ ಮೂಲದ ರಿಯಾಜ್ ಭಟ್ಕಳ ಮತ್ತು ಸಹೋದರನ ಕೈವಾಡ ಇರುವ ಶಂಕೆಯ ಬೆನ್ನಲ್ಲೇ ಇದೀಗ ಹಂಪಿಯಲ್ಲಿಯೂ ಪೊಲೀಸರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಪುಣೆ ಸ್ಫೋಟ ಪ್ರಕರಣದಲ್ಲಿ ಇಲಾಖೆಯ ಚಿತ್ತ ಕರ್ನಾಟಕದತ್ತ ನೆಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ