ಕಾಂಗ್ರೆಸ್ ಮತ್ತು ಭಾರತೀಯ ಜನತಾಪಕ್ಷದಿಂದ ನನ್ನನ್ನು ಮುಗಿಸಲು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ನನ್ನ ರಾಜಕೀಯ ಜೀವನದಲ್ಲಿಯೇ ಇಂತಹ ಸರ್ಕಾರವನ್ನು ಕಂಡಿಲ್ಲ ಎಂದರು.
ಬಿಜಾಪುರದಲ್ಲಿ ಕೇಂದ್ರ ವಿದ್ಯುತ್ ಘಟಕ ಸ್ಥಾಪನೆಗೆ ಎರಡು ಸಾವಿರ ಎಕರೆ ಭೂಮಿಯ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಇಬ್ಬರು ಸಚಿವರು ಮತ್ತು ಶಾಸಕರಿಬ್ಬರು ಈಗಾಗಲೇ ನಾಲ್ಕು ಸಾವಿರ ಎಕರೆ ಭೂಮಿಯನ್ನು ಖರೀದಿಸಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.
ಸಚಿವ, ಶಾಸಕದ್ವಯರು ಪ್ರತಿ ಎಕರೆಗೆ ಎರಡು ಲಕ್ಷ ರೂಪಾಯಿಯಂತೆ ನಾಲ್ಕು ಸಾವಿರ ಎಕರೆ ಭೂಮಿ ಖರೀದಿಸಿದ್ದು, ನಂತರ ಅದನ್ನು ಸರ್ಕಾರಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ಅವರದ್ದು ಎಂದು ಹೇಳಿದರು.
ನನಗೆ ರಾಜ್ಯದ ಮುಖ್ಯಮಂತ್ರಿಯಾಗಬೇಕು, ಪ್ರಧಾನಿಯಾಗಬೇಕು, ರಾಷ್ಟ್ರಪತಿ ಆಗಬೇಕೆಂಬ ಯಾವುದೇ ಆಸೆಯಿಲ್ಲ. ಆದರೆ ನನ್ನ ಕೊನೆಯ ಉಸಿರು ಇರುವವರೆಗೂ ರೈತರಿಗಾಗಿ ಹೋರಾಡುವೆ ಎಂದರು.