ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಸ್‌ಐಗೆ ತಪರಾಕಿ: ಇರಾನ್ ಯುವತಿಯರಿಗೆ ಜಾಮೀನು ನಕಾರ (Iran | SI | Court | Bangalore | Shivaji nagar)
Bookmark and Share Feedback Print
 
ಕರ್ತವ್ಯ ನಿರತ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಗಣೇಶ್ ರಾವ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದ ಇರಾನ್ ಮೂಲದ ಯುವತಿಯರಿಗೆ ಜಾಮೀನು ನೀಡಲು 11ನೇ ಎಸಿಎಂಎಂ ನ್ಯಾಯಾಲಯ ನಿರಾಕರಿಸಿದೆ.

ಯುವತಿಯರ ಪರವಾಗಿ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ, ವಿಚಾರಣೆಯನ್ನು ಫೆಬ್ರುವರಿ 23ಕ್ಕೆ ಮುಂದೂಡಿತು.

ಕಳೆದ ರಾತ್ರಿ ಮದ್ಯಪಾನ ಮಾಡಿ ಕಾರಿನಲ್ಲಿ ಬರುತ್ತಿದ್ದ ಇರಾನ್ ಮೂಲದ ಅಜರ್ ಫಜ್ಲೆ(29) ಹಾಗೂ ಫಾರಿಂ(26) ಎಂಬಿಬ್ಬರನ್ನು ಎಸ್‌ಐ ಗಣೇಶ್ ರಾವ್ ಮತ್ತು ಸಿಬ್ಬಂದಿಗಳು ತಡೆದು ವಿಚಾರಣೆ ನಡೆಸಿ, ಪರವಾನಿಗೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಯುವತಿ ರಾವ್ ಅವರ ಕೆನ್ನೆಗೆ ಬಾರಿಸಿದ್ದಳು. ಅಲ್ಲದೇ ಕೈಗೆ ಪರಚಿ ಗಾಯಮಾಡಿದ್ದಳು. ನಂತರ ಅವರಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ