ನಗರದ ಹೆಬ್ಬಾಳ ಕೈಗಾರಿಕಾ ವಲಯದ ಕಾರು ಗೋದಾಮಿನಲ್ಲಿ ಸಂಭವಿಸಿದ ಭಾರಿ ಅಗ್ನಿ ಆಕಸ್ಮಿಕದಲ್ಲಿ ಹೊಸ 34 ಕಾರುಗಳು ಸುಟ್ಟು ಬೂದಿಯಾಗಿದ್ದು, ಕೋಟಿಗಟ್ಟಲೆ ಹಣ ನಷ್ಟವಾಗಿದೆ.
ವಿದ್ಯುತ್ ಕಿಡಿ ಅಗ್ನಿದುರಂತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಘಟನೆ ಸಂಭವಿಸಿದಾಗ ಗೋದಾಮಿನಲ್ಲಿ ಎರಡು ಪ್ರತ್ಯೇಕ ಕಂಪೆನಿಗಳಿಗೆ ಸೇರಿದ ನೂರಕ್ಕೂ ಹೆಚ್ಚು ಕಾರುಗಳಿದ್ದವು. ಮಾರಾಟಕ್ಕಾಗಿ ಈ ಕಾರುಗಳನ್ನು ತರಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಕಾಲದಲ್ಲಿ ಎಚ್ಚೆತ್ತ ಗೋದಾಮಿನ ಭದ್ರತಾ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಸುಮಾರು ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ನಡೆಸಿದ್ದು, ಘಟನೆಯಲ್ಲಿ 34ಕಾರುಗಳು ಬೆಂಕಿಗೆ ಆಹುತಿಯಾಗಿದೆ.