ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಾರ್ಜ್ ಫರ್ನಾಂಡಿಸ್ ಚಿಕಿತ್ಸೆ ವೆಚ್ಚ ನಾವೇ ಭರಿಸುತ್ತೇವೆ: ಸಿಎಂ (George Fernandes | BJP | Yeddyurappa | Congress | Mangalore)
ಜಾರ್ಜ್ ಫರ್ನಾಂಡಿಸ್ ಚಿಕಿತ್ಸೆ ವೆಚ್ಚ ನಾವೇ ಭರಿಸುತ್ತೇವೆ: ಸಿಎಂ
ಬೆಂಗಳೂರು, ಬುಧವಾರ, 24 ಫೆಬ್ರವರಿ 2010( 10:28 IST )
PTI
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ರಕ್ಷಣಾ ಸಚಿವ, ಹಿರಿಯ ಸಮಾಜವಾದಿ ಕನ್ನಡಿಗ ಜಾರ್ಜ್ ಫರ್ನಾಂಡಿಸ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಯು ಮುಖಂಡರಾಗಿರುವ ಫರ್ನಾಂಡಿಸ್ ಅವರು ನಮ್ಮ ರಾಜ್ಯಕ್ಕೆ ಸೇರಿದವರು. ಅವರ ತೀವ್ರ ಅನಾರೋಗ್ಯದಿಂದ ಇರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಆ ನಿಟ್ಟಿನಲ್ಲಿ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸುವುದಾಗಿ ಹೇಳಿದರು.
ಈ ಹಿಂದೆ ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿರುವುದನ್ನು ಉಲ್ಲೇಖಿಸಿದ ಯಡಿಯೂರಪ್ಪ, ಜಾರ್ಜ್ ಅವರ ಆಸ್ತಿ-ಪಾಸ್ತಿ ಜಟಾಪಟಿ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ಈ ಸಂದರ್ಭದಲ್ಲಿ ನಿರಾಕರಿಸಿದರು.