ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅರಣ್ಯಗಳಲ್ಲಿ ವಾಹನ ಸಂಚಾರ ನಿಷೇಧಿಸಿ: ಮನೇಕಾ (Maneka gandhi | Mysore | Karnataka | BJP | Bangalore)
Bookmark and Share Feedback Print
 
ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಇದೇ ಮಾದರಿಯಲ್ಲಿ ದೇಶದ ಎಲ್ಲಾ ಅಭಯಾರಣ್ಯ ಪ್ರದೇಶದಲ್ಲಿಯೂ ವಾಹನಗಳ ಸಂಚಾರ ನಿಷೇಧ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವರಾದ ಮನೇಕಾಗಾಂಧಿ ಒತ್ತಾಯಿಸಿದ್ದಾರೆ.

ನಗರದ ಸಾಕು ಪ್ರಾಣಿಗಳ ಆಸ್ಪತ್ರೆಯೊಂದರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಯಾರಣ್ಯಗಳ ರಸ್ತೆಗಳಲ್ಲಿ ಪ್ರಾಣಿಗಳು ಸ್ವಚ್ಚಂದವಾಗಿ ಮತ್ತು ಮುಕ್ತವಾಗಿ ಓಡಾಡುತ್ತವೆ, ಹೀಗಾಗಿ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧಕಾಯ್ದೆಯನ್ನು ಜಾರಿಗೆ ತಂದಿರುವ ಕ್ರಮವನ್ನು ಸ್ವಾಗತಿಸಿದ ಮನೇಕಾ, ಪ್ರಾಣಿ ಬಲಿ ನಡೆಯುತ್ತಲೇ ಬಂದಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಬೇಕು. ವನ್ಯ ಪ್ರಾಣಿಗಳ ಹತ್ಯೆ ತಡೆದು ಜೀವ ವೈವಿಧ್ಯತೆ ಕಾಪಾಡಬೇಕೆಂದು ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ