ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಸ್ತೆ ಹೊರತುಪಡಿಸಿ ಹೆಚ್ಚಿನ ಭೂಮಿ ವಶಕ್ಕೆ ಬಿಡಲ್ಲ: ಗೌಡ (Deve gowda | NICE | JDS | Kumaraswamy | Yeddyurappa)
Bookmark and Share Feedback Print
 
ರಸ್ತೆ ನಿರ್ಮಾಣ ಹೊರತುಪಡಿಸಿ ಅದಕ್ಕಿಂತ ಹೆಚ್ಚಿನ ಒಂದು ಎಕರೆ ಭೂಮಿಯನ್ನು ನೈಸ್ ಸಂಸ್ಥೆ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತೆ ಗುಡುಗಿದ್ದಾರೆ.

ತುಮಕೂರು ರಸ್ತೆ ಬಳಿ ನೈಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆದ ಬೃಹತ್ ರೈತ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನೈಸ್ ಸಂಸ್ಥೆಗೆ ಉದಾರವಾಗಿ ಜಮೀನು ನೀಡುತ್ತಿರುವ ರಾಜ್ಯ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳು ಅಮಾಯಕ ರೈತರನ್ನು ವಂಚಿಸಿ ನೈಸ್ ಸಂಸ್ಥೆಗೆ ಮನಬಂದಂತೆ ಜಮೀನು ನೀಡುತ್ತಿದ್ದಾರೆ ಎಂದು ಗೌಡರು ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು.

ಇದು ಹೀಗೆ ಮುಂದುವರಿದರೆ ರೈತರೊಂದಿಗೆ ಜೈಲ್ ಭರೋ ನಡೆಸುವುದಾಗಿ ಎಚ್ಚರಿಸಿದ ಗೌಡರು, ನೈಸ್‌ನಂತಹ ವಂಚಕ ಸಂಸ್ಥೆ ರಸ್ತೆ ನಿರ್ಮಾಣದಲ್ಲಿ ತೊಡಗಿರುವುದು ಆಘಾತಕಾರಿ ವಿಷಯ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ