ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋ ಹತ್ಯೆ ನಿಷೇಧ;ಬುದ್ಧಿಜೀವಿಗಳು ದಾರಿತಪ್ಪಿಸ್ತಿದ್ದಾರೆ: ಪೇಜಾವರಶ್ರೀ (Pejavara Shri | Srikrishna Temple | Udupi | Yeddyurappa)
ಗೋ ಹತ್ಯೆ ನಿಷೇಧ;ಬುದ್ಧಿಜೀವಿಗಳು ದಾರಿತಪ್ಪಿಸ್ತಿದ್ದಾರೆ: ಪೇಜಾವರಶ್ರೀ
ಬೆಂಗಳೂರು, ಗುರುವಾರ, 25 ಫೆಬ್ರವರಿ 2010( 20:04 IST )
NRB
ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮೀಸಲಾತಿ ವಿಚಾರದಲ್ಲಿ ಬುದ್ದಿಜೀವಿಗಳು, ಕೆಲವು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ದಾರಿ ತಪ್ಪಿಸುತ್ತಿರುವುದಾಗಿ ಪೇಜಾವರಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಹಾಸನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧದ ಬಗ್ಗೆ ಬುದ್ದಿಜೀವಿಗಳು ಅನಾವಶ್ಯಕವಾಗಿ ವಿತಂಡ ತರ್ಕದ ಮೂಲದ ಜನಸಾಮಾನ್ಯರ ದಾರಿ ತಪ್ಪಿಸುತ್ತಿದ್ದಾರೆ. ದಲಿತರು ಗೋ ಮಾಂಸವೇ ತಿನ್ನಬೇಕೆಂದು ಹಠ ಹಿಡಿಯುತ್ತಿಲ್ಲ. ಅವರಿಗೆ ತಿನ್ನಲು ಬೇರೆ ಮಾಂಸ ಇದೆ. ನಿಜಕ್ಕೂ ಗೋ ಹತ್ಯೆ ನಿಷೇಧಕ್ಕೆ ದಲಿತರ ವಿರೋಧವಿಲ್ಲ ಎಂದರು.
ಗೋ ಹತ್ಯೆ ನಿಷೇಧ, ಮೀಸಲಾತಿ ಕುರಿತು ಕೆಲವು ರಾಜಕೀಯ ಪಕ್ಷಗಳು ವೋಟ್ ರಾಜಕಾರಣಕ್ಕಾಗಿ ದಲಿತರ, ಹಿಂದುಳಿದ ವರ್ಗಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಜೆಡಿಎಸ್, ಕಾಂಗ್ರೆಸ್ ಅನ್ನು ಹೆಸರಿಸದೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಗೋವು ಹಿಂದೂಗಳಿಗೆ ಪವಿತ್ರವಾದದ್ದು,ಆ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಪೇಜಾವರಶ್ರೀಗಳು ಶ್ಲಾಘಿಸಿದರು.