ಕನ್ನಡ ನಾಡು, ನುಡಿಗಾಗಿ ಹೋರಾಟ ನಡೆಸಿದ ಕನ್ನಡ ಪರ ಕಾರ್ಯಕರ್ತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಟಿ.ಎ.ನಾರಾಯಣ ಗೌಡ ನೇತೃತ್ವದ ವೇದಿಕೆಯ ಕಾನೂನು ಘಟಕದ ಅಧ್ಯಕ್ಷ ಪ್ರೊ.ಟಿ.ಬಸವರಾಜು ಅವರ ನೇತೃತ್ವದಲ್ಲಿ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಸೇರಿದ ನೂರಾರು ಕಾರ್ಯಕರ್ತರು ಕನ್ನಡ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಕನ್ನಡ ನಾಡು, ನುಡಿ,ನೆಲ, ಜಲಕ್ಕಾಗಿ ಹೋರಾಟ ನಡೆಸಿದ ಕನ್ನಡಪರ ಕಾರ್ಯಕರ್ತರ ಮೇಲೆ ಹಲವಾರು ಮೊಕದ್ದಮೆಗಳಿರುವುದು ಅವರು ಹೋರಾಟದ ಸ್ಥೈರ್ಯನ್ನು ಕುಗ್ಗಿಸಲಿದ್ದು ಕೂಡಲೇ ಮೊಕದ್ದಮೆಗಳನ್ನು ವಾಪಸುಪಡೆಯುವಂತೆ ಒತ್ತಾಯಿಸಿದರು.