ನೈಸ್ ಯೋಜನೆ ವಿರೋಧಿಸಿ ರೈತ ಪರ ಹೋರಾಟ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ರಾಷ್ಟ್ರ ರಾಜಕಾರಣ ಮಾಡುವುದು ಬಿಟ್ಟು, ಅನಗತ್ಯವಾಗಿ ರಾಜ್ಯರಾಜಕಾರಣ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಈ ಮೊದಲು ರೈತರಿಗೆ ಸಾಕಷ್ಟು ಅನ್ಯಾಯವಾಗಿತ್ತು, ಆ ಸಂದರ್ಭದಲ್ಲಿ ದೇವೇಗೌಡರಿಗೆ ರೈತರ ಕಣ್ಣೀರು, ಸಂಕಷ್ಟಗಳ ಅರಿವಾಗಿರಲಿಲ್ಲವೇ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಕೇವಲ ಸ್ವಾರ್ಥ ರಾಜಕಾರಣಕ್ಕಾಗಿ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದ ಅವರು, ನೈಜ ಕಳಕಳಿ, ಪ್ರಾಮಾಣಿಕ ಹೋರಾಟಕ್ಕೆ ಎಲ್ಲರ ಬೆಂಬಲ ಇದ್ದೇ ಇರುತ್ತೆ ಎಂದು ಹೇಳಿದರು.