ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಪಕ್ಷಗಳ ಸವಾಲು ನನಗೆ ಲೆಕ್ಕಕ್ಕಿಲ್ಲ: ಯಡಿಯೂರಪ್ಪ ತಿರುಗೇಟು (Yeddyurappa | BJP | Congress | JDS | Deve gowda)
Bookmark and Share Feedback Print
 
ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಎತ್ತುವ ವಿಷಯಗಳು ನನಗೆ ಸವಾಲೇ ಅಲ್ಲ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆ ನಿಟ್ಟಿನಲ್ಲಿ ವಿಪಕ್ಷಗಳು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿಲ್ಲ ಎಂದರು.

ಗುರುವಾರ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಭೂ ಸ್ವಾಧೀನ ವಿಚಾರ ಕುರಿತು ಪ್ರತಿಪಕ್ಷಗಳು ರಾಜ್ಯದ ಜನರ ಹಾದಿ ತಪ್ಪಿಸುತ್ತಿರುವುದಾಗಿ ಆರೋಪಿಸಿದರು.

ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸದ ವಿಪಕ್ಷಗಳು, ನಮಗೆ ತಡೆಯೊಡ್ಡಲು ಹರಸಾಹಸ ಪಡುತ್ತಿವೆ ಎಂದು ದೂರಿದ ಮುಖ್ಯಮಂತ್ರಿಗಳು, ಇಷ್ಟಕ್ಕೂ ಹಿಂದೆ ಸರ್ಕಾರ ನಡೆಸಿದ ಈ ಪಕ್ಷಗಳು ಅಭಿವೃದ್ಧಿಯನ್ನು ಎಲ್ಲಿ ಮಾಡಿದ್ದವು ?ಎಂದು ಪ್ರಶ್ನಿಸಿದರು.

ಭೂಸ್ವಾಧೀನ ಮಾಡಿಕೊಳ್ಳದೆ ಆಕಾಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸಾಧ್ಯವೇ ಎಂದು ವಿಪಕ್ಷಗಳ ಆರೋಪಕ್ಕೆ ಖಾರವಾದ ತಿರುಗೇಟು ನೀಡಿದರು. ರೈತರೇ ಜಮೀನು ನೀಡಲು ಸಿದ್ದರಿರುವಾಗ, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ರೈತರ ಹಾಗೂ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವುದಾಗಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ