ನಿಷೇಧಾಜ್ಞೆ ಉಲ್ಲಂಘಿಸಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಸೇರಿದಂತೆ 11ಜನರನ್ನು ನಗರದ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ದೋಷಮುಕ್ತಗೊಳಿಸಿದೆ.
ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ತೀರ್ಪು ಘೋಷಿಸುವ ಸಂದರ್ಭ ಮುತಾಲಿಕ್ ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು.
ಘಟನೆ ವಿವರ: 2007ರ ಡಿಸೆಂಬರ್ 30ರಂದು ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಬಾಗಲಕೋಟೆಯ ಚರಂತಿ ಮಠದ ಶಿವಾನುಭವ ಮಂಟದಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಸಿದ ಆರೋಪವನ್ನು ಮುತಾಲಿಕ್ ಹಾಗೂ ಹನ್ನೊಂದು ಮಂದಿ ಎದರಿಸುತ್ತಿದ್ದರು.