ವಿದ್ಯುತ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಸಂಬಂಧ ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯದಿಂದ ರಾಜ್ಯ ಸರ್ಕಾರ ವಿದ್ಯುತ್ ಖರೀದಿ ಮಾಡಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ದೂರಿದರು.
ಗುರುವಾರದಿಂದ ಆರಂಭವಾಗಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಹಾಗೂ ಉತ್ತರ ಇಲ್ಲದಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲನೆಯದಾಗಿದ್ದು, ಈ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಕ್ಕೆ ಸಲ್ಲಬೇಕು ಎಂದು ಲೇವಡಿ ಮಾಡಿದರು.
ವಿಧಾನಸಭಾ ಅಧಿವೇಶನ ನಡೆಯುವ ಬಗ್ಗೆ ಶಾಸಕರಿಗೆ 15ದಿನದ ಮುಂಚೆ ವಿವರವಾದ ನೋಟಿಸ್ ಕಳುಹಿಸಬೇಕು. ಅದನ್ನೂ ಸಹ ಮಾಡದೆ ಅಧಿವೇಶನ ನಡೆಸುತ್ತಿರುವುದು ಶಾಸಕರ ಪ್ರಶ್ನೆ ಮಾಡುವ ಹಕ್ಕನ್ನೂ ಸಹ ಯಡಿಯೂರಪ್ಪ ಕಸಿದುಕೊಂಡಿದ್ದಾರೆಂದು ದೂರಿದರು.