ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಅದಿರು ಕಳ್ಳಸಾಗಣೆಯಲ್ಲಿ ಸರ್ಕಾರ ಶಾಮೀಲು: ಕಾಂಗ್ರೆಸ್ (Desh pandy | KPCC | Congress | BJP | Yeddyurappa)
Bookmark and Share Feedback Print
 
NRB
ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಸಂಗ್ರಹಿಸಿದ ಕಬ್ಬಿಣದ ಅದಿರನ್ನು ನಕಲಿ ಪರವಾನಗಿ ಬಳಸಿ ವಿದೇಶಕ್ಕೆ ರಫ್ತು ಮಾಡುತ್ತಿರುವ ಜಾಲದ ಜೊತೆ ರಾಜ್ಯ ಸರ್ಕಾರವೂ ಶಾಮೀಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಗಂಭೀರವಾಗಿ ದೂರಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡುತ್ತಲೇ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸಿದ್ದಾರೆ ಎಂದು ಆರೋಪಿಸಿದರು. ಅದಿರು ಕಳ್ಳಸಾಗಣೆಯಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದರು.

ರಾಜ್ಯದಲ್ಲಿ ಅದಿರು ಕಳ್ಳಸಾಗಣೆ ನಡೆಯುತ್ತಿದ್ದರು ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಆ ನಿಟ್ಟಿನಲ್ಲಿ ಈ ದಂಧೆಯಲ್ಲಿ ಸರ್ಕಾರವೂ ಕೂಡ ಶಾಮೀಲಾಗಿದೆ ಎಂಬ ಶಂಕೆ ಮೂಡುತ್ತದೆ ಎಂದು ದೇಶಪಾಂಡೆ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ