ಮಠಾಧೀಶರು ಹಾಗೂ ಜನತೆಯ ಕೃಪೆ ಇರುವವರೆಗೆ ತನ್ನ ಮುಖ್ಯಮಂತ್ರಿ ಪಟ್ಟ ಸುಭದ್ರವಾಗಿಯೇ ಇರುತ್ತದೆಯೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸುತ್ತೂರು ಕ್ಷೇತ್ರದ ಕ್ಯಾತನಹಳ್ಳಿ ಶಿವಪ್ರಭು ಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೆಲವು ಮಂದಿ ಯಾರನ್ನೂ ನೆಮ್ಮದಿಯಾಗಿರಲು ಬಿಡೋದಿಲ್ಲ. ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರೋದು ಅವರ ಅಭ್ಯಾಸ. ಇಂತಹ ಕುತಂತ್ರಿಗಳ ವಿರುದ್ಧ ಜನರೇ ವಾಗ್ದಾಳಿ ನಡೆಸಬೇಕು. ಇಲ್ಲವಾದರೆ, ಆಡಳಿತ ನಡೆಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತದೆ. ಜಾತಿ ಹಾಗೂ ಕೋಮು ಗಲಭೆಯನ್ನು ಉಂಟು ಮಾಡಲಾಗುತ್ತದೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಯತ್ನಿಸುತ್ತಿದ್ದು, ಇದನ್ನು ಮಾಡುತ್ತೇವೆಂಬುದು ಅವರ ಭ್ರಮೆ ಎಂದರು.
ರಾಜ್ಯದ ಅಭಿವೃದ್ಧಿಗೆ ಕೈಗಾರಿಕೀಕರಣ ಅಗತ್ಯ. ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲ ಸರ್ಕಾರಗಳೂ ಭೂ ಸ್ವಾಧೀನ ಮಾಡಿ ಕೈಗಾರಿಕೆಗೆ ಆಸ್ಪದ ನೀಡಿವೆ. ಆದರೆ ನಾವು ಮಾಡಿದ್ದು ಮಾತ್ರ ಇನ್ನೊಬ್ಬರ ಕಣಣಿಗೆ ತಪ್ಪಾಗಿ ಕಾಣುತ್ತದೆ ಎಂದು ಅಸಹನೆ ವ್ಯಕ್ತಪಡಿಸಿದರು.