ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಠಾಧೀಶರಿಗೆ ಮರ್ಯಾದೆ ಇಲ್ಲವೇ?: ಬರಗೂರು ರಾಮಚಂದ್ರಪ್ಪ (Hampi | Baraguru Ramachandrappa)
Bookmark and Share Feedback Print
 
NRB
ಮಠ- ಮಾನ್ಯಗಳಿಗೆ ಹಣ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಮರ್ಯಾದೆಯೇ ಇಲ್ಲ. ಆದರೆ ಸರ್ಕಾರ ನೀಡುವ ಹಣವನ್ನು ಪಡೆಯುವ ಮಠಾಧೀಶರಿಗಾದರೂ ಮರ್ಯಾದೆ ಬೇಡವೇ? ಎಂದು ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಶಾಸಕರ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಸ್ವಾಮೀಜಿಯಾಗಲಿ, ಮಠವಾಗಲಿ ಈವರೆಗೆ ಸರ್ಕಾರದ ಹಣ ಬೇಡ ಎನ್ನುವ ಮೂಲಕ ಆತ್ಮಗೌರವ ಪ್ರದರ್ಶಿಸಿಲ್ಲ ಎಂದು ನುಡಿದ್ದಾರೆ.

ಹಂಪಿ ಉತ್ಸವಕ್ಕೆ ಸರ್ಕಾರ 30 ಕೋಟಿ ರೂ. ಖರ್ಚಾಗಿದೆ ಎಂದು ಹೇಳುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ 102 ಕೋಟಿ ರೂ. ವೆಚ್ಚವಾಗಿದೆ. ಸಾರ್ವಜನಿಕರ ಹಣ ಹೇಗೆ ಬಳಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವೂ ಸರ್ಕಾರಕ್ಕೆ ಇದ್ದಂತಿಲ್ಲ. ಬೇಡದ್ದಕ್ಕೆ ಕೋಟಿ ಗಟ್ಟಲೆ ಖರ್ಚು ಮಾಡುವ ಸರ್ಕಾರ ಅಂಗನವಾಡಿ ನೌಕರರ ಬೇಡಿಕೆಗೆ ಮೀನ ಮೇಷ ಎಣಿಸುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಎಸ್. ವರಲಕ್ಷ್ಮಿ, ನಿವೃತ್ತಿ ವೇತನ ಮತ್ತು ಬಿಪಿಎಲ್ ಕಾರ್ಡಿಗೆ ಒತ್ತಾಯಿಸಿ, ಮಾಚ್ 8ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ