ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲಂಚ ಪುರಾಣ: ಶಾಸಕ ವೈ.ಸಂಪಂಗಿಗೆ ಕ್ಲೀನ್‌ಚಿಟ್! (Lokayuktha | Y.sampangi | BJP | Yeddyurappa | Bribe)
Bookmark and Share Feedback Print
 
ಲಂಚ ಸ್ವೀಕಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ ಅವರ ವಿಚಾರಣೆ ನಡೆಸಿದ ವಿಶೇಷ ಸದನ ಸಮಿತಿ ಕ್ಲೀನ್‌ಚಿಟ್ ನೀಡುವ ಮೂಲಕ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಲಂಚ ಸ್ವೀಕಾರ ಪ್ರಕರಣದ ಕುರಿತಂತೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ನೇಮಕ ಮಾಡಿದ್ದ ವಿಶೇಷ ಸದನ ಸಮಿತಿ ಸೋಮವಾರ ವಿಧಾನಮಂಡಲದ ಅಧಿವೇಶನದಲ್ಲಿ ವರದಿಯನ್ನು ಮಂಡಿಸಿದೆ. ಪ್ರಕರಣದಲ್ಲಿ ಶಾಸಕ ವೈ.ಸಂಪಂಗಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಸಂಪಂಗಿ ವಿರುದ್ಧ ದೂರು ದಾಖಲಿಸಿದ್ದ ಹುಸೈನ್ ಫಾರೂಕ್‌ಗೆ ವಾಗ್ದಂಡನೆ ವಿಧಿಸಲು ಸಮಿತಿ ವರದಿ ಶಿಫಾರಸು ಮಾಡಿದೆ.

ಘಟನೆ ವಿವರ: ಕೆಜಿಎಫ್ ಶಾಸಕರಾಗಿದ್ದ ವೈ.ಸಂಪಂಗಿ ಅವರು ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಶಾಸಕರ ಭವನದಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ರೆಡ್‌ಹ್ಯಾಂಡ್ ಆಗಿ ಸೆರೆ ಸಿಕ್ಕಿದ್ದರು.

ಕೋಲಾರದಲ್ಲಿ ಭೂ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಹುಸೈನ್ ಫಾರೂಕ್ ಎಂಬವರ ಮೇಲೆ ಸ್ಥಳೀಯ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ದೂರಿನ ಕುರಿತು ಠಾಣೆಗೆ ಹೋದ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾಷಾ ಅವರು ನಿಮ್ಮ ಪ್ರಕರಣ ಇತ್ಯರ್ಥವಾಗಬೇಕಿದ್ದರೆ ಶಾಸಕ ಸಂಪಂಗಿಯನ್ನು ಭೇಟಿಯಾಗಿ ಎಂದು ತಿಳಿಸಿದ್ದರು.

ಬಳಿಕ ಶಾಸಕರನ್ನು ಭೇಟಿಯಾದಾಗ, ಕ್ರಿಮಿನಲ್ ಮೊಕದ್ದಮೆ ಮುಚ್ಚಿ ಹಾಕಿ, ಬಿ ರಿಪೋರ್ಟ್ ಹಾಕಿಸ್ತೇನೆ. ಐದು ಲಕ್ಷ ರೂ.ಲಂಚ ನೀಡಬೇಕೆಂದು ಫಾರೂಕ್‌ಗೆ ತಿಳಿಸಿದ್ದರು. ಅದರಂತೆ ಫಾರೂಕ್ ಅವರು ಶಾಸಕರ ಭವನದಲ್ಲಿ ಲಂಚ ನೀಡುತ್ತಿದ್ದಾಗಲೇ ಸಂಪಂಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

ಸಂಪಂಗಿ ಲೋಕಾಯುಕ್ತ ಬಲೆಗೆ ಸುದ್ದಿಗಾಗಿ ಕ್ಲಿಕ್ಕಿಸಿ
ಸಂಬಂಧಿತ ಮಾಹಿತಿ ಹುಡುಕಿ