ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಸನ-ಶಿವಮೊಗ್ಗದಲ್ಲೇ ಯಾಕೆ ಗಲಭೆ ಆಯ್ತು?: ಈಶ್ವರಪ್ಪ (Hassan | Congress | Ishwarappa | Yeddyurappa | Deve gowda)
Bookmark and Share Feedback Print
 
NRB
ಯಾವುದೋ ಒಂದು ಪತ್ರಿಕೆಯಲ್ಲಿ ಪ್ರವಾದಿ ಪೈಗಂಬರ್ ವಿರುದ್ಧ ಲೇಖನ ಪ್ರಕಟವಾಗಿದೆ ಅಂತ ಶಿವಮೊಗ್ಗ ಮತ್ತು ಹಾಸನಗಳಲ್ಲಿಯೇ ಈ ರೀತಿಯ ಹಿಂಸಾಚಾರ ನಡೆಯಬೇಕಾದರೆ ಇದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಆದರೆ ಏಕಾಏಕಿ ಮೂರು ಸಾವಿರ ಜನರ ಕೈಯಲ್ಲಿ ಪೆಟ್ರೋಲ್ ಬಾಂಬ್, ಮಚ್ಚು, ದೊಣ್ಣೆ ಬರಬೇಕಾದರೆ, ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂದೇ ಅರ್ಥ. ಯಾರು ಇದಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.

ಅವಕಾಶವಾದಿ ರಾಜಕಾರಣದಿಂದ ಮುಸಲ್ಮಾನರನ್ನು ಎತ್ತಿಕಟ್ಟಿ ಹಿಂದೂಗಳ ಮನೆ, ಅಂಗಡಿ-ಮುಂಗಟ್ಟು, ದೇವಾಲಯಗಳ ಮೇಲೆ ನಡೆಸಿರುವ ಈ ಘಟನೆಯನ್ನು ಪ್ರತಿಯೊಬ್ಬ ನಾಗರಿಕನೂ ಖಂಡಿಸಲೇಬೇಕಾಗಿದೆ ಎಂದು ಕಿಡಿಕಾರಿದರು. ಅಲ್ಲದೇ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿಯೇ ಮಾತ್ರ ಯಾಕೆ ಗಲಭೆ ನಡೆಯಿತು?ಈ ಪಿತೂರಿ ಹಿಂದೆ ಯಾರಿದ್ದಾರೆ?ಧರ್ಮಾಂಧ ಸಂಘಟನೆಗಳು ಕಾರಣವೇ?ಎಂಬ ಸತ್ಯಾಂಶ ಬಹಿರಂಗವಾಗಬೇಕಾಗಿದೆ ಎಂದು ಈಶ್ವರಪ್ಪ ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ