ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ ಕೋಲಾಹಲವೆಬ್ಬಿಸಿದ 'ಕಲ್ಲಿದ್ದಲು ಅವ್ಯವಹಾರ' (BJP | Revannada | JDS | Congress | Siddaramaiah | Yeddyurappa)
Bookmark and Share Feedback Print
 
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಇಂಧನ ಸಚಿವರಾಗಿದ್ದಾಗ ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಸಿ ಸದನವನ್ನು ಸ್ವಲ್ಪ ಹೊತ್ತು ಮುಂದೂಡುವಂತಾಯಿತು.

ಒಂದು ಹಂತದಲ್ಲಿ ಜೆಡಿಎಸ್ ಶಾಸಕರನ್ನು ಸದನದಿಂದ ಹೊರಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಪರಿಸ್ಥಿತಿ ಅರಿತು ತಕ್ಷಣವೇ ಎದ್ದುನಿಂತ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದಸ್ಯರನ್ನು ಹೊರಗೆ ಹಾಕುವ ಹಂತಕ್ಕೆ ಹೋಗುವುದು ಬೇಡ. ಸದನವನ್ನು ಸ್ವಲ್ಪಹೊತ್ತು ಮುಂದೂಡಿ, ನಾವೆಲ್ಲಾ ಕುಳಿತು ಸಮಾಲೋಚಿಸಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಮಾಡಿದ ಸಲಹೆಗೆ ಸಭಾಧ್ಯಕ್ಷರು ಸಮ್ಮತಿಸಿ ಸದನವನ್ನು ಮುಂದೂಡಿದರು.

ಬುಧವಾರ ಸದನ ಆರಂಭವಾಗುತ್ತಿದ್ದಂತೆಯೇ ಮುಖ್ಯಮಂತ್ರಿಯವರು ನೀಡಿರುವ ಹೇಳಿಕೆ ಕುರಿತಂತೆ ನಿಲುವಳಿ ಸೂಚನೆ ಮೂಲಕ ಚರ್ಚಿಸಲು ಅವಕಾಶ ನೀಡಬೇಕೆಂದು ಶಾಸಕರಾದ ಎಚ್.ಡಿ.ರೇವಣ್ಣ ಮತ್ತು ಎಚ್.ಸಿ.ಬಾಲಕೃಷ್ಣ ಅವರು ಒತ್ತಾಯಿಸಿದರು.

ಈ ಬಗ್ಗೆ ಸದನದಲ್ಲಿ ಗೊಂದಲ, ಕೋಲಾಹಲದ ವಾತಾವರಣ ಮುಂದುವರಿದಾಗ, ಮುಖ್ಯಮಂತ್ರಿಗಳು ಮಾತನಾಡಿ ರಾಜ್ಯದ ಜನ ನಿಮ್ಮನ್ನು ಗಮನಿಸುತ್ತಿದ್ದಾರೆ. ಕಾರ್ಯ ಕಲಾಪಗಳಿಗೆ ತಡೆಯೊಡ್ಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬೇರೆ ಸದಸ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರ ನಿಮಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಎಲ್ಲಾ ಗೊಂದಲ ವಾಗ್ವಾದದ ನಡುವೆಯೇ ಧರಣಿ ಕೈಬಿಟ್ಟು ಸ್ಥಳಗಳಿಗೆ ತೆರಳುವಂತೆ ಸಭಾಧ್ಯಕ್ಷರು ಮತ್ತೊಮ್ಮೆ ಮನವಿ ಮಾಡಿದರು. ಇಲ್ಲದಿದ್ದರೆ ಸದನದಿಂದ ಹೊರಹಾಕುವುದಾಗಿ ಎಚ್ಚರಿಸಿದರು. ನಂತರ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಹೊರಹಾಕುವ ಎಚ್ಚರಿಕೆ ಬೇಡ. ಸದನವನ್ನು ಮುಂದೂಡಿ, ನಂತರ ಚರ್ಚಿಸುವ ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ