ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ವಾಮೀಜಿಗಳನ್ನ ದೇವರಂತೆ ಆರಾಧಿಸಬಾರ್ದು: ಅಗ್ನಿ ಶ್ರೀಧರ್ (Nithyananda swamy | sex scandal | bidadi | sexual act | bengaluru)
ಸ್ವಾಮೀಜಿಗಳೆಲ್ಲ ದೇವಮಾನವರಲ್ಲ, ಅವರನ್ನು ದೇವರಂತೆ ಪೂಜೆ ಮಾಡುವುದನ್ನು ಕೈಬಿಡಬೇಕು ಎಂದು ಪತ್ರಕರ್ತ ಅಗ್ನಿ ಶ್ರೀಧರ್ ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಕುರಿತಂತೆ ಬುಧವಾರ ಖಾಸಗಿ ಟಿವಿ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳನ್ನು ದೇವರಂತೆ ಆರಾಧಿಸುವುದನ್ನು ಕೈಬಿಡಬೇಕು. ಅಭಿಮಾನವಿದ್ದರೆ ಕೇವಲ ಗೌರವ ಮಾತ್ರ ನೀಡಲಿ ಎಂದು ಹೇಳಿದರು.
ಸ್ವಾಮೀಜಿಗಳ ಸುತ್ತಮುತ್ತ ಸುಂದರ ಯುವತಿಯರೇ ಇರುತ್ತಾರೆ. ಸ್ತ್ರೀ ಸಮೂಹವನ್ನು ಆಕರ್ಷಿಸುವುದೇ ಸ್ವಾಮಿಗಳ ಪ್ರಮುಖ ಗುರಿಯಾಗಿರುತ್ತದೆ. ಇಂತಹ ಕಾಮುಕ ಸ್ವಾಮೀಜಿಗಳ ಕೃತ್ಯವನ್ನು ಬಯಲಿಗೆಳೆಯಬೇಕಾಗಿದೆ. ಆ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಇಂತಹ ಮೋಸಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಬಿಡದಿ ಆಶ್ರಮಕ್ಕೆ ಬೆಂಕಿ: ಸ್ವಾಮೀಜಿಯ ಲೈಂಗಿಕ ರಾಸಲೀಲೆ ಹೊರಬೀಳುತ್ತಿದ್ದಂತೆಯೇ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಬಿಡದಿ ಬಳಿ ಇರುವ ನಿತ್ಯಾನಂದನ ಆಶ್ರಮದ ಮೂರು ಕುಟೀರಗಳಿಗೆ ಬೆಂಕಿ ಹಚ್ಚಿದ ಘಟನೆ ಬುಧವಾರ ಸಂಜೆ ನಡೆದಿದೆ.
ಆಶ್ರಮದ ಹೊರಗಿರುವ ನಿತ್ಯಾನಂದನ ಚಿತ್ರವಿದ್ದ ಬ್ಯಾನರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದ್ದು, ಕಾಮುಕ ನಿತ್ಯಾನಂದ ಸ್ವಾಮಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸ್ವಾಮೀಜಿಯ ರಾಸಲೀಲೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ, ನಿತ್ಯಾನಂದ ಸ್ವಾಮೀಜಿ ನಾಪತ್ತೆಯಾಗಿದ್ದಾನೆ. ಆತನ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ರಾಜ್ಯವಿಧಾನಸಭೆಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಒತ್ತಾಯ ಹೇರಿವೆ.