ರಾಜ್ಯದ ಪ್ರಸಕ್ತ ಸಾಲಿನ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಬೆಂಗಳೂರಿಗೆ ಬಂಪರ್ ಕೊಡುಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುನ್ಸೂಚನೆ ನೀಡಿದ್ದು ಇದೀಗ ಎಲ್ಲರ ಕಣ್ಣು ನಾಳಿನ ಬಜೆಟ್ ಮೇಲೆ ನೆಟ್ಟಿದೆ.
ನಾಳೆ ಮಧ್ಯಾಹ್ನ ವಿತ್ತ ಖಾತೆ ಹೊಣೆ ಹೊತ್ತಿರುವ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ. ನಾಳೆ ಮಂಡನೆಯಾಗಲಿರುವ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವ ಹೊಸ ಕಾರ್ಯಕ್ರಮಗಳು ಜಾರಿಯಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.
ಪ್ರಸಕ್ತ ಸಾಲಿನ ಬಜೆಟ್ ಜನಪರವಾಗಲಿದ್ದು, ರೈತರಿಗೆ ವಿಶೇಷ ಕೊಡುಗೆ ನೀಡುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಾಳೆ ಯಡಿಯೂರಪ್ಪನವರು ಮಂಡಿಸಲಿರುವ ಬಜೆಟ್ ಅವರ 5ನೇ ಬಜೆಟ್ ಆಗಿದೆ.
ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 2ಬಜೆಟ್ ಮಂಡಿಸಿದ್ದ ಯಡಿಯೂರಪ್ಪನವರು ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸುತ್ತಿರುವ 3ನೇ ಬಜೆಟ್ ಇದಾಗಿದೆ.
ನಾಳೆ ಮಧ್ನಾಹ್ನ 12.05ಕ್ಕೆ ಸಚಿವ ಸಂಪುಟದ ಸಭೆ ಇದ್ದು, ಅಲ್ಲಿ ಬಜೆಟ್ ಔಪಚಾರಿಕವಾಗಿ ಅನುಮೋದನೆ ಪಡೆದ ನಂತರ ವಿಧಾನಸಭೆಯಲ್ಲಿ 12.15ಕ್ಕೆ ಬಜೆಟ್ ಮಂಡಿಸಲಿದ್ದಾರೆ.