ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಬಜೆಟ್ ಮುಖ್ಯಾಂಶ: ಏನು ಏರಿತು, ಏನು ಇಳಿಯಿತು? (State Budget | Karnataka Budget 2010-11 | Yaddyurappa | BJP Government)
ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಸಕ್ಕರೆ ಮೇಲೆ ಪ್ರವೇಶ ತೆರಿಗೆ, ವ್ಯಾಟ್ ತೆರಿಗೆಯಲ್ಲಿ ಏರಿಕೆ, ವಿಲಾಸಿ ಹೋಟೆಲ್ ವಾಸ್ತವ್ಯದ ಮೇಲೆ ಹೆಚ್ಚಿನ ತೆರಿಗೆ, ಮಠಮಾನ್ಯಗಳ ಓಲೈಕೆಗಾಗಿ ಸಾಕಷ್ಟು ಆರ್ಥಿಕ ನೆರವು, ಕೃಷಿ ಚಟುವಟಿಕೆಗಳು, ಆರೋಗ್ಯ ಕ್ಷೇತ್ರಗಳಿಗೆ ಪ್ರೋತ್ಸಾಹವನ್ನು ಘೋಷಿಸಿದ್ದಾರೆ.
ಪ್ರಮುಖ ಅಂಶಗಳು * ಶೇ.12.5ರಿಂದ ಶೇ.13.5 ವ್ಯಾಟ್ ಏರಿಕೆ * ಸಕ್ಕರೆ ಮೇಲೆ ಪ್ರವೇಶ ತೆರಿಗೆ ತುಟ್ಟಿ * ವಿಲಾಸಿ ಹೋಟೆಲ್ ವಾಸ್ತವ್ಯ ಮತ್ತಷ್ಟು ತುಟ್ಟಿ * ಕಾಗಿನೆಲೆ , ಆದಿಚುಂಚನಗಿರಿ 5 ಕೋಟಿ, ರಂಭಾಪುರಿ 3 ಕೋಟಿ ಕ್ಷೇತ್ರಗಳಿಗೆ ಕೋಟಿ ಕೋಟಿ ನೆರವು * ಈ ವರ್ಷದಿಂದಲೇ ಪ್ರೌಢ ಶಿಕ್ಷಣ ಕಡ್ಡಾಯ * ವಾಹನ ಮಾರಾಟ ತೆರಿಗೆ ಶೇ.10ರಿಂದ ಶೇ.11ಕ್ಕೆ ಏರಿಕೆ * ಮಹಿಳಾ, ಮಕ್ಕಳ ಕಲ್ಯಾಣಕ್ಕೆ 1832 ಕೋಟಿ * ಗ್ರಾಮೀಣಾಭಿವೃದ್ಧಿಗೆ 3442 ಕೋಟಿ * ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ * ನೆರೆ ಹಾವಳಿಗೆ 1457 ಕೋಟಿ ಕೇಂದ್ರದ ನೆರವು * ನೆರೆ: 350 ಗ್ರಾಮಗಳ ಶಾಶ್ವತ ಸ್ಥಳಾಂತರ
* 126 ತಾಲೂಕುಗಳಲ್ಲಿ ನಿರಂತರ ಜ್ಯೋತಿ ಯೋಜನೆ * 487 ಪಶು ವೈದ್ಯ ಹುದ್ದೆಗಳಿಗೆ ನೇಮಕಾತಿ * ಆಕಸ್ಮಿಕ ಮರಣ ಹೊಂದಿದ ರೈತರಿಗೆ 1 ಲಕ್ಷ ರೂ. ಪರಿಹಾರ * ಬಳ್ಳಾರಿ, ಬೆಂಗಳೂರು, ಮೈಸೂರು ಆಯುರ್ವೇದ ಆಸ್ಪತ್ರೆಗಳ ಉನ್ನತೀಕರಣಕ್ಕೆ 5 ಕೋಟಿ ರೂ. * ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳ ಉನ್ನತೀಕರಣ 100 ಕೋಟಿ * ಗ್ರಾಮೀಣ ಪ್ರದೇಶದ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ * ಗ್ರಾಮೀಣ ಬಾಣಂತಿಯರಿಗೆ 1 ಸಾವಿರ ರೂ.
* ಹಿಂದುಳಿದ ಪ್ರದೇಶಾಭಿವೃದ್ಧಿಗೆ 2580 ಕೋಟಿ * ಮಲೆನಾಡು ಅಭಿವೃದ್ಧಿ ಮಂಡಳಿಗೆ ತಲಾ 53 ಕೋಟಿ * ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗಾಗಿ 300 ಕೋಟಿ * ಪ್ರಾಥಮಿಕ, ಪ್ರೌಢ ಶಿಕ್ಷಣ ವ್ಯವಸ್ಥೆಗಾಗಿ 8830 * ಉಚಿತ ಬೈಸಿಕಲ್ ನೀಡಲು 200 ಕೋಟಿ * ಶಾಲೆಗಳ ಕೊಠಡಿ, ಶೌಚಾಲಯ ಅಭಿವೃದ್ಧಿಗೆ 100 ಕೋಟಿ * ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಭಾರತ್ ಆಯುಷ್ ವೈದ್ಯ ವಿಜ್ಞಾನ ಸಂಸ್ಥೆ * ಮಂಗಳೂರಿನ ಪಿಳಿಕುಳ ಮತ್ತು ಚಿಕ್ಕಬಳ್ಳಾಪುರದಲ್ಲಿ ತಾರಾಲಯ ಸ್ಥಾಪನೆಗೆ 15ಕೋಟಿ ನೆರವು. *ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ 1ಸಾವಿರ ರೂ. ನೆರವು. *ಪ್ರಸಕ್ತ ಸಾಲಿನಲ್ಲಿ 5ಲಕ್ಷ 35ಸಾವಿರ ಮನೆ ನಿರ್ಮಾಣ. *ರೇಶ್ಮೆ ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ.
* ಮುಖ್ಯಮಂತ್ರಿ ನಗರೋತ್ತಾನ ಯೋಜನೆಗೆ 600ಕೋಟಿ * ಚಿಕ್ಕಬಳ್ಳಾಪುರದಲ್ಲಿ ಹಾಲು ಸಂಸ್ಕರಣಾ ಘಟಕ *ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ 2580ಕೋಟಿ *ಪ್ರಾಥಮಿಕ, ಪ್ರೌಢಶಿಕ್ಷಣ ಅಭಿವೃದ್ದಿಗಾಗಿ 8830ಕೋಟಿ *ವಿಶ್ವಕನ್ನಡ ಸಮ್ಮೇಳನಕ್ಕೆ 10ಕೋಟಿ *ನಂದಿಬೆಟ್ಟದಲ್ಲಿ ನೂತನ ತಾರಾಲಯ ನಿರ್ಮಾಣಕ್ಕೆ 1ಕೋಟಿ *ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು *ಶಾಲೆಗಳ ಶೌಚಾಲಯಕ್ಕೆ 100ಕೋಟಿ ರೂ. *ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 207ಕೋಟಿ ರೂ. *ಶಾದಿ ಮಹಲ್ ನಿರ್ಮಾಣಕ್ಕೆ 10ಕೋಟಿ *ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 5ಕೋಟಿ *ಗ್ರಾಮಾಂತರ ಪ್ರದೇಶಗಳಲ್ಲಿ ಗರಡಿ ಮನೆ ನಿರ್ಮಾಣಕ್ಕೆ 2ಕೋಟಿ *ಕಮ್ಮಾರ, ಕುಂಬಾರ, ಅಕ್ಕಸಾಲಿಗರ ಆರ್ಥಿಕ ಚಟುವಟಿಕೆಗಳ ಬೆಂಬಲಕ್ಕೆ 20ಕೋಟಿ *ಪತ್ರಕರ್ತರಿಗೆ ಮಾಸಾಶನ 1 ರಿಂದ 2 ಸಾವಿರಕ್ಕೆ ಏರಿಕೆ. *ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಪೂರ್ಣಗೊಳಿಸಲು 150ಕೋಟಿ *ಯಡಿಯೂರೂ ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ 10 ಕೋಟಿ ರುಪಾಯಿ.
ಇಂದು ಮಧ್ನಾಹ್ನ ತಮ್ಮ ನಿವಾಸದಿಂದ ಶ್ವೇತವಸ್ತ್ರಧಾರಿಯಾಗಿ ಕೆಂಪು ಬಣ್ಣದ ಬ್ರೀಫ್ ಕೇಸ್‌ನೊಂದಿಗೆ ಹೊರಟು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮೊದಲಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ನಂತರ 2010-11ರ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದರು.
ಸಿಎಂ ಕುಟುಂಬ ಉಪಸ್ಥಿತಿ: ಯಡಿಯೂರಪ್ಪನವರು ಮಂಡಿಸುತ್ತಿರುವ 5ನೇ ರಾಜ್ಯ ಬಜೆಟ್ ಮಂಡನೆ (ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 2ಬಜೆಟ್ ಮಂಡಿಸಿದ್ದ ಯಡಿಯೂರಪ್ಪನವರು ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸುತ್ತಿರುವ 3ನೇ ಬಜೆಟ್ ಇದಾಗಿದೆ.) ಸಂದರ್ಭದಲ್ಲಿ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಹಾಗೂ ಪುತ್ರಿ ಉಮಾದೇವಿ, ಮೊಮ್ಮಕ್ಕಳು ವಿಧಾನಸೌಧದಲ್ಲಿ ಹಾಜರಿದ್ದರು.
ಬಜೆಟ್ ಮಂಡನೆ ಸಂದರ್ಭ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಆರ್ಥಿಕ ಅಭಿವೃದ್ಧಿಯ ಸಾಧನೆಯ ಮೂಲ ಮಂತ್ರ ಎಂಬ ಚಾಣಕ್ಯ ನೀತಿಯ ಉಕ್ತಿಯನ್ನು ಉಚ್ಚರಿಸಿ, ಅಭಿವೃದ್ಧಿಯೇ ಸರ್ಕಾರದ ಮೂಲ ಮಂತ್ರ ಎಂದರು.
ನೇಗಿಲ ಯೋಗಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ರೈತರ ಏಳಿಗಾಗಿ ಮುಂಗಡ ಪತ್ರದಲ್ಲಿ ಆದ್ಯತೆಯನ್ನು ನೀಡುತ್ತಾ ಬಂದಿದ್ದೇನೆ. ದುರ್ಬಲ, ಹಿಂದುಳಿದ, ಅಲ್ಪಸಂಖ್ಯಾತರ, ಮಹಿಳೆಯರ ಏಳಿಗಾಗಿ ಶ್ರಮಿಸಿದ್ದೇನೆ. ಶಿಕ್ಷಣ, ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಗೂ ಆದ್ಯತೆ ನೀಡುತ್ತಾ ಬಂದಿದ್ದೇನೆ. ಸಮಾಜದ ಸರ್ವತೋಮುಖ ಏಳಿಗಾಗಿ ಶ್ರಮಿಸಿರುವುದಾಗಿ ಹೇಳಿದರು.
2010-11ನೇ ಸಾಲಿನಲ್ಲಿ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿದೆ. ನೆರೆ ಪೀಡಿತ 305ಹಳ್ಳಿಗಳ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಕೇಂದ್ರದ ನೆರವಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.