ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಜೆಟ್: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೋಟಿ ಕೋಟಿ (State Budget | Karnataka Budget 2010-11 | Yaddyurappa | BJP Government | Religious Places)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ 2010-11ನೇ ಸಾಲಿನ ಆಯವ್ಯಯ ಪತ್ರದಲ್ಲಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈಗಾಗಲೇ ಸಮಾಜ ಸೇವೆಯಲ್ಲಿ ನಿರತವಾಗಿರುವ ಮತ್ತು ಸಾಕಷ್ಟು ಶ್ರೀಮಂತವಾಗಿಯೇ ಇರುವ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಣಕಾಸು ನೆರವು ಘೋಷಿಸಿದ್ದಾರೆ.

ಅವುಗಳಲ್ಲಿ ಪ್ರಮುಖವಾದವುಗಳು ಈ ರೀತಿಯಾಗಿವೆ:
* ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ರೂ.
* ಶ್ರವಣಬೆಳಗೊಳ ಬಾಹುಬಲಿ ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ರೂ.
* ಆದಿ ಚುಂಚನಗಿರಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ.
* ರಂಭಾಪುರಿ ಕ್ಷೇತ್ರದ ಉದ್ಧಾರಕ್ಕೆ 3 ಕೋಟಿ ರೂ.
* ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಕೋಟಿ ರೂ.
* ಮಾನಸ ಸರೋವರ ಯಾತ್ರೆ ಮಾಡುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಅತಿಥಿಗೃಹಕ್ಕಾಗಿ 3 ಕೋಟಿ ರೂ.
* ಗುಲ್ಬರ್ಗಾ ದೇವಲ ಗಾಣಗಾಪುರ ಕ್ಷೇತ್ರಾಭಿವೃದ್ಧಿಗೆ 2 ಕೋಟಿ ರೂ.
* ಮಂತ್ರಾಲಯ, ಹರಿದ್ವಾರ, ಕಾಶಿಯಲ್ಲಿರುವ ಕರ್ನಾಟಕದ ಯಾತ್ರಾ ಗೃಹಗಳಿಗಾಗಿ 25 ಕೋಟಿ ರೂ.
* ತಿರುಪತಿಗೆ ತೆರಳುವ ಕರ್ನಾಟಕ ಯಾತ್ರಿಗಳ ಅತಿಥಿಗೃಹಕ್ಕಾಗಿ 5 ಕೋಟಿ ರೂ.
* ಶಬರಿಮಲೆ ತೆರಳುವ ಕರ್ನಾಟಕ ಜನರ ಅತಿಥಿಗೃಹಕ್ಕಾಗಿ 5 ಕೋಟಿ ರೂ. ಮೀಸಲಿಡಲಾಗಿದೆ.
* ಬಸವ ಕಲ್ಯಾಣ ಪ್ರಾಧಿಕಾರಕ್ಕೆ 5 ಕೋಟಿ.
* ಕೂಡಲ ಸಂಗಮ ಪ್ರಾಧಿಕಾರಕ್ಕೆ 5 ಕೋಟಿ.
ಸಂಬಂಧಿತ ಮಾಹಿತಿ ಹುಡುಕಿ